ಉರುಳಿದ ಶಾಲಾ ವಾಹನ: ತಪ್ಪಿದ ಭಾರಿ ಅನಾಹುತ

ಗುಂಡ್ಲುಪೇಟೆ, ಮಾ.9: ತಾಲೂಕಿನ ಅರೇಪುರ ಗ್ರಾಮದ ಬಳಿ ಇಕ್ಕಟ್ಟಾದ ರಸ್ತೆಯಲ್ಲಿ ಎದುರಾದ ಬೈಕಿಗೆ ದಾರಿಕೊಡಲು ಪಕ್ಕಕ್ಕೆ ಸರಿದ ಶಾಲಾವಾಹನವೊಂದು ಬದಿಗೆ ಉರುಳಿದ ಘಟನೆ ಸಂಭವಿಸಿದೆ.
ಬೇಗೂರಿನ ಲಿಟಲ್ ಫ್ಲವರ್ ಶಾಲೆಗೆ ಸೇರಿದ ಶಾಲಾವಾಹನದಲ್ಲಿ ರಂಗೂಪುರ ಗ್ರಾಮದ 4 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ವಾಹನವು ಅರೇಪುರ ಸಮೀಪ ಸಂಚರಿಸುವಾಗ ಎದುರಾದ ಬೈಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಪಕ್ಕಕ್ಕೆ ಸರಿಸಿದ ಪರಿಣಾಮವಾಗಿ ವಾಹನ ಬದಿಗೆ ಉರುಳಿದೆ.
ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ.
Next Story





