ಉಡುಪಿ: ಟ್ಯಾಂಕರ್- ಕಾರು ಢಿಕ್ಕಿ; ಮಾಜಿ ಸೈನಿಕ ಮೃತ್ಯು

ಉಡುಪಿ, ಮಾ.9: ಕಿನ್ನಮುಲ್ಕಿ ಬಲಾಯಿಪಾದೆ ಎಂಬಲ್ಲಿ ಮಾ.8ರಂದು ಮಧ್ಯಾಹ್ನ 12:30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರ ಡಿವೈಡರ್ ನಡುವಿನ ಗಿಡಗಳಿಗೆ ನೀರು ಸಿಂಪಡಿಸುತ್ತಿದ್ದ ಟ್ಯಾಂಕರ್‌ಗೆ ಕಾರೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ನಿವೃತ್ತ ಸೈನಿಕರೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಚೇರ್ಕಾಡಿಯ ನಿವೃತ್ತ ಸೈನಿಕ ಸಂಜೀವ(72) ಎಂದು ಗುರು ತಿಸಲಾಗಿದೆ.
ಇವರು ತನ್ನ ಮಾರುತಿ ಕಾರಿನಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆ ಹೋಗುತ್ತಿದ್ದಾಗ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ವಹಿಸದೆ ಡಿವೈಡರ್ ಬಳಿ ನಿಲ್ಲಿಸಿ ಗಿಡಗಳಿಗೆ ನೀರನ್ನು ಸಿಂಪಡಿಸುತ್ತಿದ್ದ ಟ್ಯಾಂಕರ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದರು.
ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





