ಕಸ ವಿಲೇವಾರಿ ಮಹಿಳೆ ಸುಂದರಿ ಪುತ್ತೂರಿಗೆ ಸನ್ಮಾನ
ಉಡುಪಿ, ಮಾ.9: ಉಡುಪಿ ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಬೀಯಿಂಗ್ ಸೋಶಿಯಲ್ ಸಂಘಟನೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಬುಧವಾರ ಹನುಮಂತನಗರ ಪ್ರೌಢಶಾಲೆಯ ಸಭಾಂಗಣದಲ್ಲಿ ಆಚರಿಸಲಾಯಿತು.
ಉಡುಪಿ ನಗರಸಭೆಯ ವ್ಯಾಪ್ತಿಯಲ್ಲಿ ಕಳೆದ 11ವರ್ಷಗಳಿಂದ ತಮ್ಮ ತಂಡದ ನೇತೃತ್ವದಲ್ಲಿ ಸ್ವತಃ ತಾನೇ ಆಟೋರಿಕ್ಷಾ ಚಲಾಯಿಸುವ ಮೂಲಕ ಮನೆ ಮನೆಗೆ ತೆರಳಿ ಕಸ ವಿಲೇವಾರಿ ಮಾಡುತ್ತಿರುವ ಸುಂದರಿ ಪುತ್ತೂರು ಅವರನ್ನು ಸನ್ಮಾನಿಸಲಾಯಿತು.
ಪೂರ್ಣಿಮಾ ಸುರೇಶ್, ಶೈಲಾ ಫೆರ್ನಾಂಡಿಸ್, ಚೇತನಾ ಶೆಣೈ, ಸುಷ್ಮಾ ಆರ್.ನಾಯ್ಕ್, ಜ್ಯೋತಿ ನಿತ್ಯಾನಂದ ಶೇಟ್, ಫಿರ್ದೋಸ್ ತೋನ್ಸೆ ಮುಖ್ಯ ಅತಿಥಿಗಳಾಗಿದ್ದರು.
ನಗರಸಭೆಯ ಮಾಜಿ ಅಧ್ಯಕ್ಷ ಯುವರಾಜ್, ಅವಿನಾಶ್ ಕಾಮತ್, ಗಣೇಶ್ ಪ್ರಸಾದ್ ಜಿ.ನಾಯಕ್, ರವಿರಾಜ್, ವಿನಯಚಂದ್ರ, ನಾಗರಾಜ್ ಭಂಡಾರ್ಕಾರ್, ಹರೀಶ್ ನಾಯಕ್, ರಕ್ಷಿತ್ ಕುಮಾರ್ ವಂಡ್ಸೆ ಉಪಸ್ಥಿತರಿದ್ದರು.
Next Story





