ಸುಳ್ಳು ಮಾಹಿತಿ ನೀಡಿ ವಂಚನೆ ದೂರು ದಾಖಲು
ಹೊನ್ನಾವರ, ಮಾ.9: ಬ್ಯಾಂಕ್ ಶಾಖೆಯ ಅಧಿಕಾರಿಯೆಂದು ಸುಳ್ಳು ಮಾಹಿತಿ ನೀಡಿ ಗ್ರಾಹಕರೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ 1.27 ಲಕ್ಷ ರೂ. ಲಪಟಾಯಿಸಿರುವ ಬಗ್ಗೆ ಹೊನ್ನಾವರ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಕಾಸರಕೋಡದ ಟೊಂಕಾ ನಿವಾಸಿ ವಿಜಯಾ ಮೇಸ್ತ ವಂಚನೆಗೊಳಗಾದವರು. ಇವರಿಗೆ ಫೆ.4ರಂದು ಮಧ್ಯರಾತ್ರಿ ಅಪರಿಚಿ ತರೊಬ್ಬರು ಕರೆ ಮಾಡಿ ‘ನಿಮ್ಮ ಖಾತೆಯಲ್ಲಿರುವ ಹಣ ಪಡೆಯಲು ಎಟಿಎಂ ಕಾರ್ಡ್‌ನ್ನು ಸರ್ವಿಸ್ ಮಾಡಬೇಕಾಗಿದೆ. ಇಲ್ಲವಾದಲ್ಲಿ ಹಣ ವರ್ಗಾವಣೆ ಸಾಧ್ಯವಿಲ್ಲ’ ಎಂದಿದ್ದಾರೆ. ಎಟಿಎಂ ಕಾರ್ಡ್‌ನ ಪಿನ್ ನಂಬರ್ ನೀಡಿದರೆ ಹಣ ವರ್ಗಾವಣೆಯ ಅಡೆತಡೆಗಳನ್ನು ಸರಿಪಡಿಸುವುದಾಗಿ ತಿಳಿಸಿದ್ದಾರೆ.
ಅಪರಿಚಿತನಿಗೆ ವಿಜಯಾ ಮೇಸ್ತ ಎಟಿಎಂ ಪಿನ್ ನಂಬರ್ ನೀಡಿದ್ದಾರೆ.
ಬಳಿಕ ಫೆ.5ರಂದು ಸಂಜೆಯ ವೇಳೆ ಖಾತೆಯಲ್ಲಿದ್ದ 1.27 ಲಕ್ಷ ರೂ.ಲಪಟಾಯಿಸಿರುವ ಬಗ್ಗೆ ಎಸ್ಸೆಮ್ಮೆಸ್ ಬಂದ ಬಂದ ಹಿನ್ನೆಲೆಯಲ್ಲಿ ಗಾಬರಿಗೊಂಡ ವಿಜಯಾ ಮೇಸ್ತ ಹೊನ್ನಾವರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
Next Story





