ಮಂಗಳೂರು ಕೇಂದ್ರ ಕಾರಾಗೃಹದಿಂದ ವಿಚಾರಣಾಧೀನ ಕೈದಿ ಪರಾರಿ

ಸಾಂದರ್ಭಿಕ ಚಿತ್ರ
ಮಂಗಳೂರು, ಮಾ.10: ಮಂಗಳೂರು ಕೇಂದ್ರ ಕಾರಾಗೃಹದಿಂದ ವಿಚಾರಾಣಾಧೀನ ಕೈದಿಯೋರ್ವ ಜೈಲು ಸಿಬ್ಬಂದಿಯ ಕಣ್ತಪ್ಪಿಸಿ ಪರಾರಿಯಾದ ಘಟನೆ ಇಂದು ಮುಂಜಾನ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಿವಾಸಿ ಜಿನ್ನಪ್ಪಪರವ ತಪ್ಪಿಸಿಕೊಂಡ ಕೈದಿಯಾಗಿದ್ದಾನೆ. ಅತ್ಯಾಚಾರ ಯತ್ನ ಮತ್ತು ಕಳವು ಪ್ರಕರಣದ ಆರೋಪದಲ್ಲಿ ಈತ ಬಂಧಿತನಾಗಿದ್ದ. ಈತನನ್ನು ವಿಚಾರಣಾಧೀನ ಕೈದಿಯಾಗಿ ಮಂಗಳೂರು ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು.
ಈತ ಇಂದು ಮುಂಜಾವ ಜೈಲು ಸಿಬ್ಬಂದಿಯ ಕಣ್ತಪ್ಪಿಸಿ, ಜೈಲಿನ ಭಧ್ರಕೋಟೆಯನ್ನು ಭೇದಿಸಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





