ಜೆದ್ದಾದಲ್ಲಿ 68ನೇ ಗಣರಾಜ್ಯೋತ್ಸವ

ಜೆದ್ದಾ, ಮಾ.10: ದಿ ಇಂಡಿಯನ್ ಕಲ್ಚರಲ್ ಸೊಸೈಟಿ ಜೆದ್ದಾ (ಐಸಿಎಸ್‌ಜೆ) ಮತ್ತು ನಗರದ ಎನ್‌ಆರ್‌ಐ ಸಂಘಟನೆ ಬಾಝ್ಮಿ-ಎ-ಒಸ್ಮಾನಿಯಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ 68ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಟ ನಡೆಸಿ ಹುತಾತ್ಮರಾದ ವೀರ ಯೋಧರನ್ನು ಇದೇ ಸಂದರ್ಭದಲ್ಲಿ ಸ್ಮರಿಸಲಾಯಿತು.
ಜೆದ್ದಾದ ರಾಯಭಾರಿ ಕಚೇರಿ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ರಾಯಭಾರಿ ಮುಹಮ್ಮದ್ ನೂರ‍್ ರಹ್ಮಾನ್ ಶೇಕ್ ಮುಖ್ಯ ಅತಿಥಿಯಾಗಿದ್ದರು. ಬಾಲಿವುಡ್ ಸಿಂಗರ್ ಮುಹಮ್ಮದ್ ಅಯಾಝ್, ನಟ ಅಕ್ಬರ‍್ ಸೊಲ್ಲಾಪುರಿ, ದೂತಾವಾಸದ ವ್ಯವಹಾರಗಳ ರಾಯಭಾರಿ ಆನಂದ್ ಕುಮಾರ್, ಪತ್ರಿಕಾ ರಾಯಭಾರಿ ಇರ್ಶಾದ್ ಅಹ್ಮದ್, ಸಮುದಾಯ ಕಲ್ಯಾಣ ಮತ್ತು ಆಡಳಿತ ರಾಯಭಾರಿ ಮೊಯಿನ್ ಅಕ್ತರ್, ಇಂಡೋಮಿಯಾ ಮಾರುಕಟ್ಟೆ ನಿರ್ದೇಶಕ ರೆನಾಲ್ಡ್ ಸಿಸ್ವಾಡಿ,ದಿಲ್ಲಿ ಪಬ್ಲಿಕ್ ಸ್ಕೂಲ್ ನ ನಿರ್ದೇಶಕ ಝಿಯಾ ಅಬ್ದಲ್ಲ ನದ್ವಿ, ಏರ‍್ ಇಂಡಿಯಾ ಮ್ಯಾನೇಜರ‍್ ಎಂ.ಎ.ನೂರ‍್ ಮುಹಮ್ಮದ್, ವಿಮಾನ ನಿಲ್ದಾಣದ ಮ್ಯಾನೇಜರ‍್ ಕೋಶಿ ಜಾನ್, ಏರ‍್ ಇಂಡಿಯಾ ರಿಸರ್ವ್‌ವೇಶನ್ ಮ್ಯಾನೇಜರ‍್ ಆಸಿಫ್ ದೌದಿ ಮತ್ತು ಜೆದ್ದಾದ ಇಂಟರ‍್ ನ್ಯಾಶನಲ್ ಇಂಡಿಯನ್ ಸ್ಕೂಲ್ ನ ತಾಹೆರ‍್ ಅಲಿ ಅಥಿತಿಗಳಾಗಿ ಭಾಗವಹಿಸಿದ್ದರು.





