ಅಬುಧಾಬಿ : ಭಾರತದ ಮಹಿಳೆ ಅಪಘಾತದಲ್ಲಿ ಸಾವು

ಅಬುಧಾಬಿ, ಮಾ. 10: ಕೇರಳದ ಯುವತಿ ಅಬುಧಾಬಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಚಾಲಕ್ಕುಡಿ ಆಲೂರಿನ ಜೇಮ್ಸ್,ಶೈಲಾ ದಂಪತಿ ಪುತ್ರಿ ಸ್ಮತಿ ಜೇಮ್ಸ್ (25) ಮೃತಪಟ್ಟ ಮಹಿಳೆಯಾಗಿದ್ದಾರೆ.
ರಸ್ತೆ ದಾಟುವ ವೇಳೆ ಬುಧವಾರ ಅಬುಧಾಭಿ ಬಸ್‌ಸ್ಟಾಂಡಿನ ಪಕ್ಕದಲ್ಲಿ ಈ ಅಪಘಾತ ಸಂಭವಿಸಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸು ನೀಗಿದರು.
ಅಬುಧಾಬಿ ಮುರೂರ್ ರಸ್ತೆ ಅಲ್‌ಫಲಾಹ್ ಫ್ಲಾಝದ ಸಮೀಪದ ಗ್ಲೋಬಲ್ ವಿಂಗ್ ರೆಂಟ್ ಎ ಕಾರ್‌ನ ಎಚ್‌ಆರ್ ಮ್ಯಾನೇಜರ್ ಆಗಿ ಸ್ಮತಿ ಕೆಲಸ ಮಾಡುತ್ತಿದ್ದರು.
ಕಳೆದ ಎರಡುವರ್ಷ ಗಳಿಂದ ಈ ಸಂಸ್ಥೆಯಲ್ಲಿ ಅವರು ದುಡಿಯುತ್ತಿದ್ದಾರೆ ತಂದೆ ಜೇಮ್ಸ್ ಮುಸಫಾದಲ್ಲಿ ಖಾಸಗಿ ಕಂಪೆನಿ ಉದ್ಯೋಗಿ, ತಾಯಿ ಅಬುಧಾಬಿ ಎಲ್‌ಎಲ್‌ಎಚ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಸ್ಮತಿ ಕೆಲವು ವರ್ಷಗಳಲ್ಲಿ ಅಬುಧಾಬಿ ಹಮ್ದಾನ್ ಸ್ಟ್ರೀಟ್ ಡು ಆಫೀಸ್ ಸಮೀಪದಲ್ಲಿ ತಂದೆತಾಯಿಯರ ಜೊತೆ ವಾಸಿಸುತ್ತಿದ್ದರು ಎಂದು ವರದಿ ತಿಳಿಸಿದೆ.
Next Story







