ವ್ಯಾಲಂಟೈನ್ ದಿನದಂದು ನೈತಿಕ ಗೂಂಡಾಗಳಿಂದ ಹಲ್ಲೆಗೊಳಗಾದ ಯುವತಿಗೆ ಕೊಲೆ ಬೆದರಿಕೆ

ಕೊಲ್ಲಂ,ಮಾ.10: ಪ್ರೇಮಿಗಳ ದಿನದಂದು ಕೊಲ್ಲಂನ ಬೀಚ್‌ನಲ್ಲಿ ನೈತಿಕ ಗೂಂಡಾಗಿರಿಗೆ ಗುರಿಯಾದ ಯುವತಿಗೆ ಕೆಲವರು ಯುವತಿಯ ತಂದೆಯ ಮುಂದೆಯೇ ಕೊಲೆಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ಯುವತಿ ದುಷ್ಕರ್ಮಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಬೀಚ್‌ನಲ್ಲಿ ಇವಳ ಜೊತೆ ಇದ್ದ ಯುವಕ ಈಗಾಗಲೇ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಈ ಹಿಂದೆ ನಡೆದಿದೆ. ಕಳೆದ ಪ್ರೇಮಿಗಳ ದಿನದಂದು ಬೀಚ್‌ನಲ್ಲಿ ಇವರ ವಿರುದ್ಧ ನೈತಿಕ ಗೂಂಡಾಗಿರಿ ನಡೆದಿತ್ತು.
ಆತ್ಮಹತ್ಯೆ ಮಾಡಿಕೊಂಡ ಅನೀಷ್ ಮತ್ತು ಅವನ ಜೊತೆ ಇದ್ದ ಈ ಯುವತಿಯ ಮೊಬೈಲ್ ಫೋನ್‌ಗಳನ್ನು ಗೂಂಡಾಗಳು ಬಲವಂತದಿಂದ ಕಿತ್ತುಕೊಂಡು ನಂತರ ಇವರಿ ಬ್ಬರನ್ನು ಅಪಮಾನಿಸುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ವೀಡಿಯೊ ಪೋಸ್ಟ್‌ಮಾಡಿದ್ದರು. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು ಎಂದು ವರದಿ ತಿಳಿಸಿದೆ.
Next Story





