ಸೋನಿಯಾ ಗಾಂಧಿ ಬಗ್ಗೆ ಸಿಟಿ ರವಿ ಅವಹೇಳನಕಾರಿ ಟ್ವೀಟ್
ದಿನೇಶ್ ಗುಂಡುರಾವ್ ಖಂಡನೆ
ಬೆಂಗಳೂರು, ಮಾ.10: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಗ್ಗೆ ಸಿಟಿ ರವಿ ಟ್ವೀಟ್ ಮಾಡಿರುವುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಖಂಡಿಸಿದ್ದಾರೆ.
' ಇದು ಸಿಟಿ ರವಿ ಮತ್ತು ಬಿಜೆಪಿ ನಾಯಕರ ವಿಕೃತ ಮನಸ್ಸಿನ ಪ್ರತಿಬಿಂಬ. ಮನಸ್ಸಿನಲ್ಲಿ ಕೊಳಕು ಇದ್ದಾಗ ಹೀಗೆ ಆಗುತ್ತೆ. ಹಿಂದುತ್ವದ ಬಗ್ಗೆ ಮಾತನಾಡುವವರು ಈ ರೀತಿ ಮಾತನಾಡೋದು ಎಷ್ಟು ಸಮಂಜಸ' ಎಂದು ಪ್ರಶ್ನಿಸಿದ್ದಾರೆ.
'ಅಂಬರೀಷ್ ಕೂಡ ಚಿಕತ್ಸೆಗೆ ವಿದೇಶಕ್ಕೆ ಹೋಗಿದ್ರು. ವೈಯಕ್ತಿಕ ವಿಚಾರಗಳನ್ನು ಪ್ರಶ್ನೆ ಮಾಡೋದು ಹೇಸಿಗೆ ತರುವ ವಿಚಾರ. ಇದು ಪ್ರಚಾರದ ಗಿಮಿಕ್ ಅನ್ನಿಸುತ್ತೆ. ಇಂತಹ ಚರ್ಚೆಗಳು ಸಾರ್ವಜನಿಕ ಜೀವನದಲ್ಲಿ ಆಗಬಾರದು ಎಂದು ಖಂಡಿಸಿದ್ದಾರೆ.
ವಾಜಪೇಯಿ ಅವರಿಗೆ ಸರ್ಜರಿ ಮಾಡೋಕೆ ವಿದೇಶಿ ವೈದ್ಯರು ಬಂದಿದ್ದರು. ಅವಾಗ ನಮ್ಮದೇಶದಲ್ಲಿ ವೈದ್ಯರು ಇರಲಿಲ್ವಾ ಎಂದು ಪ್ರಶ್ನೆ ಎಂದು ದಿನೇಶ್ ಗುಂಡುರಾವ್ ಪ್ರಶ್ನಿಸಿದ್ದಾರೆ.
ಮಹಿಳೆಯರ ಬಗ್ಗೆ ಗೌರವಿಸುವ, ಜೈ ಶ್ರೀರಾಮ್, ಭಾರತ್ ಮಾತಾಕಿ ಜೈ ಎನ್ನುವವರ ಮುಖವಾಡ ಇದರಿಂದ ಗೊತ್ತಾಗುತ್ತದೆ ಎಂದು ಸಿಟಿ ರವಿ ಹೇಳಿಕೆ ಖಂಡನೆ ವ್ಯಕ್ತಪಡಿಸಿದ್ದಾರೆ.