ಮ್ಯಾನ್ ಹೋಲ್ ದುರಂತ: ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಣೆ
.jpg)
ಬೆಂಗಳೂರು, ಮಾ.10: ಮ್ಯಾನ್ ಹೋಲ್ ದುರಂತ ವಿಚಾರವಾಗಿ ಜಲಮಂಡಳಿ, ಬಿಬಿಎಂಪಿ ಜೊತೆ ಚರ್ಚಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ತಿಳಿಸಿದ ಸಮಾಜ ಕಲ್ಯಾಣ ಸಚಿವ ಆಂಜನೇಯ, ವ್ಯಕ್ತಿಗಳಿಂದ ಮ್ಯಾನ್ ಹೋಲ್ ಸ್ವಚ್ಛ ಮಾಡಿಸೋದು ಕಾನೂನು ಅಪರಾಧವಾಗಿದೆ. ಮೃತರಾದ ಮೂವರ ಕುಟುಂಬಕ್ಕೆ ಜಲಮಂಡಳಿ ವತಿಯಿಂದ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾತ್ರಿ ವೇಳೆ ಗುತ್ತಿಗೆದಾರರು ಕಾರ್ಮಿಕರನ್ನು ಕರೆತಂದು ಮ್ಯಾನ್ ಹೋಲ್ ನಲ್ಲಿ ಇಳಿಸಿದ್ದಾರೆ. ಮಲ ಮುಟ್ಟಬಾರದು ಎನ್ನುವ ಕಾನೂನೆ ಇದೆ. ಈ ಬಗ್ಗೆ ಜಲಮಂಡಳಿಗೆ ಸ್ಪಷ್ಟನೆ ಕೇಳಿದ್ದೇವೆ. ಎಂದು ತಿಳಿಸಿದರು.
ಮ್ಯಾನ್ ಹೋಲ್ಗೆ ಇನ್ನು ಮುಂದೆ ಯಾರೂ ಇಳಿಯಬಾರದು. ಮ್ಯಾನ್ ಹೋಲ್ ಇಳಿಯುವ ಮುನ್ನ ಸ್ಥಳಿಯ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಇರಬೇಕು. ಯಂತ್ರದ ಮೂಲಕ ಮ್ಯಾನ್ ಹೋಲ್ ಓಪನ್ ಮಾಡಬೇಕು. ಅನಿವಾರ್ಯ ಕಾರಣದಿಂದ ಮ್ಯಾನ್ ಹೋಲ್ ನಲ್ಲಿ ಇಳಿಯಬೇಕಾದಲ್ಲಿ ಎಲ್ಲಾ ರೀತಿಯ ಪ್ರಿಕಾಶನ್ ಇರಬೇಕು. ಇಂಥಹ ಒಂದು ಕಾನೂನು ಜಾರಿಗೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.





