ಮಂಗಳೂರು: ಕೆನರಾ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸೈಕ್ಲಥಾನ್ ರ‍್ಯಾಲಿ

ಮಂಗಳೂರು, ಮಾ.10: ಕೆನರಾ ಇಂಜಿನಿಯರಿಂಗ್ ಕಾಲೇಜಿನ ಎನ್ನೆಸ್ಸೆಸ್ ಘಟಕ, ಮಂಗಳೂರು ಸೈಕ್ಲಿಂಗ್ ಕ್ಲಬ್ ಸಹಯೋಗದಲ್ಲಿ ಪಡೀಲ್‌ನಿಂದ ಬೆಂಜನಪದವು ಕಾಲೇಜು ಆವರಣದವರೆಗೆ ಇತ್ತೀಚಿಗೆ ಸೈಕ್ಲಥಾನ್ ರ‍್ಯಾಲಿ ನಡೆಯಿತು.
ಮಂಗಳೂರಿನ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಹೆಗ್ಡೆ ರ‍್ಯಾಲಿಗೆ ಚಾಲನೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಗಣೇಶ್ ವಿ.ಭಟ್, ಅಶ್ವಿನಿ ಹೊಳ್ಳ, ವಿದ್ಯಾರ್ಥಿ ಪ್ರಮುಖರಾದ ಅತುಲ್ ಕಾಮತ್, ರಜತ್ ಭಂಡಾರ್ಕರ್ ಮತ್ತಿತತರು ಉಪಸ್ಥಿತರಿದ್ದರು.
Next Story





