ಕಟೀಲು ದೇವಿಯ ಅವಹೇಳನ: ಫೇಸ್‌ಬುಕ್ ಅಕೌಂಟ್ ಬ್ಲಾಕ್‌ಗೆ ಪತ್ರ

ಮಂಗಳೂರು, ಮಾ.10: ಫೇಸ್‌ಬುಕ್‌ನಲ್ಲಿ ಕಟೀಲು ದೇವಿ ಮತ್ತು ರಾಮಾಯಣದ ಸೀತೆಗೆ ಅವಹೇಳನಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಅಧಿಕಾರಿಗಳು 11 ಫೇಸ್‌ಬುಕ್ ಅಕೌಂಟ್‌ಗಳನ್ನು ಬ್ಲಾಕ್ ಮಾಡಲು ಕೇಂದ್ರ ಸರಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಮುಸ್ಲಿಂ ಯುವ ಸೇನೆ, ನಾನೊಬ್ಬ ಹಿಂದೂ ಸಹಿತ 11 ಅಕೌಂಟ್‌ಗಳಲ್ಲಿ ರಾಮಾಯಣದ ಸೀತೆ, ಕಟೀಲಿನ ದೇವಿಗೆ ಅವಹೇಳನ ಕುರಿತು 2016ರಲ್ಲಿ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಲ್ಲದೆ, ಜೆಎಂಎಫ್‌ಸಿ ಎರಡನೆ ನ್ಯಾಯಾಲಯವು ಫೇಸ್‌ಬುಕ್ ಅಕೌಂಟ್ ಬ್ಲಾಕ್ ಸಹಿತ ಸೂಕ್ತ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿತ್ತು.
ಅದರಂತೆ ಮಂಗಳೂರು ನಗರ ಪೊಲೀಸರು ಇದೀಗ ಕೇಂದ್ರ ಸರಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳಿಗೆ ಪತ್ರ ಬರೆದು ಸಮಾಜದಲ್ಲಿ ಪ್ರಕ್ಷುಬ್ಧ ಸ್ಥಿತಿ, ಕ್ಷೋಭೆ ಆಗುವ ಭೀತಿ ಇರುವುದರಿಂದ 11 ಫೇಸ್‌ಬುಕ್ ಅಕೌಂಟ್‌ಗಳನ್ನು ಬ್ಲಾಕ್ ಮಾಡಲು ಸೂಚಿಸಿದ್ದಾರೆ.
Next Story





