ವಿವಾಹಿತ ಪುರುಷರು ಪಾದ್ರಿಗಳಾಗಬಹುದು: ಪೋಪ್

ರೋಮ್, ಮಾ. 10: ರೋಮನ್ ಕೆಥೋಲಿಕ್ ಚರ್ಚ್‌ನಲ್ಲಿರುವ ಧರ್ಮಗುರುಗಳ ಕೊರತೆಯನ್ನು ನೀಗಿಸುವುದಕ್ಕಾಗಿ ವಿವಾಹಿತ ಪುರುಷರು ಪಾದ್ರಿಗಳಾಗುವುದಕ್ಕೆ ತನ್ನ ಆಕ್ಷೇಪವಿಲ್ಲ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.
ಕೆಥೋಲಿಕ್ ಧರ್ಮಗುರುಗಳ ಕೊರತೆಯು ಚರ್ಚ್ ಎದುರಿಸುತ್ತಿರುವ ‘ಬೃಹತ್ ಸಮಸ್ಯೆ’ಯಾಗಿದೆ ಎಂದು ಜರ್ಮನಿಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.
ಪಾದ್ರಿ ಹುದ್ದೆಯ ಅರ್ಹತೆ ನಿಯಮಗಳನ್ನು ಬದಲಿಸುವುದಕ್ಕೆ ತಾನು ಮುಕ್ತವಾಗಿದ್ದೇನೆ ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದರು.
Next Story





