'ರಂಗಹಬ್ಬ-5' ನಾಟಕೋತ್ಸವ ಸಮಾರೋಪ

ಉಡುಪಿ, ಫೆ.28: ಸುಮನಸಾ ಕೊಡವೂರು ವತಿಯಿಂದ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಸಂಸ್ಕೃತಿ ನಿರ್ದೇಶನಾಲಯ ನವದೆಹಲಿ, ಪೇಜಾವರ ಅಧೋಕ್ಷಜ ಮಠದ ಸಹಯೋಗದೊಂದಿಗೆ ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ಆಯೋಜಿಸಲಾದ ಏಳು ದಿನಗಳ 'ರಂಗಹಬ್ಬ-5' ನಾಟಕೋತ್ಸವದ ಸಮಾರೋಪ ಸಮಾರಂಭ ಇಂದು ಜರಗಿತು.
ಈ ಸಂದರ್ಭದಲ್ಲಿ ರಂಗಕರ್ಮಿ ರವಿಕುಮಾರ್ ಕಡೆಕಾರ್ ಅವರಿಗೆ ರಂಗ ಸಾಧಕ ಸನ್ಮಾನ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್‌ನ ಆಗಮ ಪಂಡಿತ ಕೇಂಜ ಶ್ರೀಧರ ತಂತ್ರಿ, ತುಳು ಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಮೇಟಿ ಮುದಿಯಪ್ಪ, ಉದ್ಯಮಿಗಳಾದ ಆನಂದ ಸಿ.ಸುವರ್ಣ, ದಾಮೋದರ್ ಕುಂದರ್, ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಪ್ರಶಾಂತ್ ಶೆಟ್ಟಿ, ಹೇರಂಜೆ ಕೃಷ್ಣ ಭಟ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಪ್ರವೀಣ್ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮನಸಾ ಕೊಡವೂರು ತಂಡದಿಂದ ವಿದ್ದು ಉಚ್ಚಿಲ್ ನಿರ್ದೇಶನದ ಱಮುದ್ರಾರಾಕ್ಷಸೞನಾಟಕ ಪ್ರದರ್ಶನಗೊಂಡಿತು.





