ಬ್ರಹ್ಮಾವರ: ನೇಣು ಬಿಗಿದು ಆತ್ಮಹತ್ಯೆ

ಬ್ರಹ್ಮಾವರ, ಮಾ.10: ಕಾಲು ನೋವಿನಿಂದ ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದ ಹೊಸೂರು ಗ್ರಾಮದ ಕರ್ಜೆ ಕಂಪ ನಿವಾಸಿ ಐತು ನಾಯ್ಕ ಎಂಬವರ ಮಗ ರವಿ ನಾಯ್ಕ(24) ಎಂಬವರು ಖಿನ್ನತೆಗೊಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಮಾ.9ರಂದು ರಾತ್ರಿ ವೇಳೆ ಮನೆಯ ಪಕ್ಕದಲ್ಲಿರುವ ದನದ ಹಟ್ಟಿಯ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





