ತೋಟಕ್ಕೆ ಕಾಡ್ಗಿಚ್ಚು ಆವರಿಸಿ ಲಕ್ಷಾಂತರ ರೂ. ಬೆಳೆ ಹಾನಿ
.jpg)
ಸಾಗರ, ಮಾ.10: ತಾಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯತ್‌ನ ಚೆನ್ನಾಪುರ ಗ್ರಾಮದಲ್ಲಿ ತೋಟಕ್ಕೆ ಕಾಡ್ಗಿಚ್ಚು ಆವರಿಸಿ ಲಕ್ಷಾಂತರ ರೂ. ಬೆಳೆಹಾನಿಯಾದ ಘಟನೆ ಗುರುವಾರ ರಾತ್ರಿ ನಡೆದಿದೆ. ವಿಪರೀತ ಬಿಸಿಲಿನಿಂದ ಇದ್ದಕ್ಕಿದ್ದಂತೆ ಕಾಡನ್ನು ಆವರಿಸಿದ್ದ ಕಾಡ್ಗಿಚ್ಚು ಚೆನ್ನಾಪುರ ಗ್ರಾಮದ ಸರ್ವೇ ನಂ.46ರಲ್ಲಿರುವ ತಮ್ಮಣ್ಣಪ್ಪ, ಹೇರಂಬಪ್ಪ, ಚಂದ್ರಪ್ಪಎಂಬವರ ತೋಟವನ್ನು ಆವರಿಸಿದೆ.
ಕಾಡ್ಗಿಚ್ಚಿನಿಂದ ಸುಮಾರು 5 ಎಕರೆ ಪ್ರದೇಶದಲ್ಲಿ ಫಸಲಿಗೆ ಬಂದಿದ್ದ ಅಡಿಕೆ, ಬಾಳೆ ಸಂಪೂರ್ಣ ನಾಶವಾಗಿದೆ. ಇದರ ಜೊತೆಗೆ ತೋಟದ ನೀರಾವರಿ ವ್ಯವಸ್ಥೆಗಾಗಿ ಅಳವಡಿಸಿದ್ದ ಸುಮಾರು 3 ಎಕರೆ ಪ್ರದೇಶದ ಪೈಪ್‌ಲೈನ್ ಸಂಪೂರ್ಣ ಸುಟ್ಟು ಹೋಗಿದ್ದು, ಸುಮಾರು 10 ಲಕ್ಷ ರೂ. ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸುವ ಮೂಲಕ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.
Next Story





