ಅಪರಿಚಿತ ವ್ಯಕ್ತಿ ಸಾವು
ಮುಂಡಗೋಡ, ಮಾ.10: ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾದ ಘಟನೆ ಪಟ್ಟಣದ ವೈ.ಬಿ.ರಸ್ತೆ (ಲಿಮ್ರಾ ಸರ್ಕಲ್) ಬಸವನ ಬೀದಿಯಲ್ಲಿ ಗುರುವಾರ ಮಧ್ಯಾಹ್ನ ವರದಿಯಾಗಿದೆ.
ಸುಮಾರು 60-65 ವಯಸ್ಸಿನ ಆಸುಪಾಸಿನಲ್ಲಿರುವ ಮೃತವ್ಯಕ್ತಿಯು ಅತಿಯಾದ ಕುಡಿತ ಹಾಗೂ ಹಸಿವಿನಿಂದ ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದೆ.
ಈ ಕುರಿತು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾರಸುದಾರರ ಪತ್ತೆಗೆ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
Next Story





