ಅಪರಿಚಿತ ಮಹಿಳೆ ಸಾವು
ಮೂರ್ನಾಡು, ಮಾ.10: ಅನಾರೋಗ್ಯದಿಂದ ಬಳಲುತ್ತಿದ್ದ ಅಪರಿಚಿತ ಮಹಿಳೆಯೋರ್ವಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ಶುಕ್ರವಾರ ಬೆಳಗ್ಗೆ ಆಟೊ ಚಾಲಕರೊಬ್ಬರು ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಯ ಸಂದರ್ಭ ಸಾವನ್ನಪ್ಪಿದ್ದಾರೆ. ಅಪರಿಚಿತ ಮಹಿಳೆಯು ಚೂಡಿದಾರ್, ಬೂದು ಬಣ್ಣದ ಶ್ವೆಟರ್, ಮೂಗುತಿ ಹಾಗೂ ಓಲೆ ಧರಿಸಿದ್ದಾರೆ.
ಸುಮಾರು 40 ವರ್ಷ ಪ್ರಾಯವಿರಬಹುದು ಎಂದು ಅಂದಾಜಿಸಲಾಗಿದೆ.
ಮೃತದೇಹವನ್ನು ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾದೆವಾರಸುದಾರರುಇದ್ದಲ್ಲಿ ಮೂರ್ನಾಡು ಪೊಲೀಸ್ ಉಪಠಾಣೆಯನ್ನು ಸಂಪರ್ಕಿಸಲು ಪೊಲೀಸರು ತಿಳಿಸಿದ್ದಾರೆ.
Next Story





