ಶಿಶುಜನನದ ಆರೋಗ್ಯಪಾಲನಾ ಗುಣಮಟ್ಟ ಸುಧಾರಣೆ
ವಿಶ್ವಸಂಸ್ಥೆ ಜೊತೆ ಕೈಜೋಡಿಸಿದ ಭಾರತ
ಹೊಸದಿಲ್ಲಿ, ಮಾ.10: ಬಾಣಂತಿಯರು ಹಾಗೂ ನವಜಾತಶಿಶುಗಳಿಗಾಗಿನ ಆರೋಗ್ಯಪಾಲನೆ ಸೇವೆಗಳ ಗುಣಮಟ್ಟವನ್ನು ಅಭಿವೃದ್ಧಿಪಡಿಸುವ ವಿಶ್ವ ಆರೋಗ್ಯ ಸಂಸ್ಥೆಯ ಉಪಕ್ರಮವನ್ನು ಜಾರಿಗೊಳಿಸ ಹೊರಟಿರುವ ಎಂಟು ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಗೊಂಡಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಓ) ಹಾಗೂ ಇತರ ಪಾಲುದಾರ ಸಂಘಟನೆಗಳು ಫೆಬ್ರವರಿಯಲ್ಲಿ ಮಲಾವಿಯಲ್ಲಿ ಆರಂಭಿಸಿದ ಜನನದ ಸುತ್ತ ಪಾಲನಾ ಗುಣಮಟ್ಟದ ಸುಧಾರಣೆ ಜಾಲವನ್ನು ಆರಂಭಿಸಿತ್ತು.
ಭಾರತ, ಬಾಂಗ್ಲಾ ಹಾಗೂ ಆಫ್ರಿಕದ ಏಳು ದೇಶಗಳು, ‘ಶಿಶುಜನನದ ಸುತ್ತ ಆರೋಗ್ಯಪಾಲನಾ ಗುಣಮಟ್ಟ’ವನ್ನು ಸುಧಾರಣೆಗೊಳಿಸುವ ಬದ್ಧತೆಯನ್ನು ಘೋಷಿಸಿವೆಯೆಂದು ಕೇಂದ್ರ ಸಹಾಯಕ ಸಚಿವ ಫಗ್ಗನ್ ಸಿಂಗ್ ಕುಲಾಸ್ತೆ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ, ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ (ಬಿಎಂಜಿಎಫ್), ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿನ ಅಮೆರಿಕ ಏಜೆನ್ಸಿ (ಯುಎಸ್
ಎಐಡಿ) ಹಾಗೂ ಯುನಿಸೆಫ್ ಈ ಯೋಜನೆಯ ಇತರ ಪಾಲುದಾರರಾಗಿದ್ದಾರೆ.
Next Story





