ಉತ್ತರಾಖಂಡ: ಅಧಿಕಾರ ಹಿಡಿಯುವತ್ತ ಬಿಜೆಪಿ
ಆಡಳಿತಾರೂಢ ಕಾಂಗ್ರೆಸ್‌ಗೆ ಮುಖಭಂಗ

ಡೆಹ್ರಾಡೂನ್, ಮಾ.11: ಉತ್ತರಾಖಂಡ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ 54 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರ ಹಿಡಿಯುವತ್ತ ದಾಪುಗಾಲಿಟ್ಟಿದೆ. ಉತ್ತರಪ್ರದೇಶ ಚುನಾವಣೆಯ ಫಲಿತಾಂಶ ಉತ್ತರಾಖಂಡದ ಮೇಲೂ ಪರಿಣಾಮಬೀರಿದೆ.
ದೇಶದ ಅತ್ಯಂತ ದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಬಿಜೆಪಿ 308 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ಸರಕಾರ ರಚನೆಗೆ 202 ಸದಸ್ಯರ ಅಗತ್ಯವಿದೆ.
ಮತ್ತೊಂದೆಡೆ ಹರೀಶ್ ರಾವತ್ ನೇತೃತ್ವದ ಆಡಳಿತಾರಾಢ ಕಾಂಗ್ರೆಸ್ ಪಕ್ಷ ಉತ್ತರಾಖಂಡದಲ್ಲಿ ಕೇವಲ 14 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ತೀವ್ರ ಮುಖಭಂಗ ಅನುಭವಿಸಿದೆ. ಪಕ್ಷೇತರರು 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.
70 ಸದಸ್ಯರಿರುವ ಉತ್ತರಾಖಂಡ ವಿಧಾನಸಭಾ ಕ್ಷೇತ್ರಗಳಲ್ಲಿ ಸರಕಾರ ರಚನೆಗೆ 36 ಸದಸ್ಯರ ಅಗತ್ಯವಿದ್ದು, ಭಾರೀ ಮುನ್ನಡೆಯಲ್ಲಿರುವ ಬಿಜೆಪಿ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ.
*ಬಿಜೆಪಿಗೆ 54 ಕ್ಷೇತ್ರಗಳಲ್ಲಿ ಮುನ್ನಡೆ
*ಸರಕಾರ ರಚನೆಗೆ ಮ್ಯಾಜಿಕ್ ಸಂಖ್ಯೆ 36.
*ಕಾಂಗ್ರೆಸ್‌ಗೆ 14 ಕ್ಷೇತ್ರಗಳಲ್ಲಿ ಮುನ್ನಡೆ
*ಉತ್ತರಾಖಂಡದಲ್ಲಿ 70 ಕ್ಷೇತ್ರಗಳ 637 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ