ನನ್ನಾಕೆಗೆ ಇದು ಚಂದ ಕಾಣುತ್ತೆ ಎಂದು ತೋರಿಸಲು ನಾನು ಇದನ್ನು ಹಾಕಿಕೊಂಡಿದ್ದೇನೆ : ಹುಸೈನ್ ಮಿಯಾ
ನನ್ನ ಕತೆ

ಕಳೆದ ಒಂದು ತಿಂಗಳಿನಿಂದ ನನ್ನ ವೃದ್ಧ ಮಹಿಳೆಗೆ ಹಗಲಿನ ವೇಳೆ ನೋಡುವುದು ಸಮಸ್ಯೆಯಾಗುತ್ತಿದೆ. ಆಕೆಯ ಕಣ್ಣುಗಳು ಸೂರ್ಯನ ಬೆಳಕಿಗೆ ಸೆನ್ಸಿಟಿವ್ ಆಗುತ್ತವೆ. ಆದರೆ ಮಧ್ಯಾಹ್ನ ಆಕೆ ಹೊರಗೆ ಬರಲೇಬೇಕಾಗುತ್ತದೆ. ಪ್ರತಿದಿನ ನನಗೆ ಊಟ ತರುತ್ತಾಳೆ.
ಕಳೆದ ಐವತ್ತು ವರ್ಷಗಳಲ್ಲಿ ಆಡಿದ ಮಾಂಸ ತಿನ್ನಲು ಆಕೆ ನನಗೆ ಅವಕಾಶವನ್ನೇ ಕೊಡಲಿಲ್ಲ. ಬಹುತೇಕ ಎಲ್ಲ ಬಾರಿಯೂ ನನ್ನ ಊಟದ ಮೆನೂ ಒಂದೇ ಆಗಿರುತ್ತದೆ. ಬಿಸಿ ಅನ್ನ, ಕಾಳು, ಜಜ್ಜಿದ ಟೊಮ್ಯಾಟೊ ಹಾಗೂ ಹಸಿ ಮೆಣಸಿನಕಾಯಿ. ಅದಕ್ಕಿಂತ ಹೆಚ್ಚಿನದ್ದು ನಮ್ಮ ಕೈಗೆಟುಕುವಂತಿಲ್ಲ.
ನೀರು ತುಂಬಿಕೊಂಡ ನನ್ನ ಪತ್ನಿಯ ಕಣ್ಣುಗಳನ್ನು ನೋಡುವುದು ನನಗೆ ಅಸಾಧ್ಯ. ಆಕೆಗಾಗಿ ವಾರದ ಹಿಂದೆ ನಾನು ಸನ್‌ಗ್ಲಾಸ್ ಖರೀದಿಸಿದೆ. ನನಗಾಗಿ ಇದನ್ನು ಧರಿಸಬೇಕು ಎಂದು ಆಕೆಗೆ ಮನವಿ ಮಾಡಿಕೊಂಡೆ.
ಆದರೆ ಈ ವಯಸ್ಸಿನಲ್ಲಿ ನಾನು ಸ್ಮಾರ್ಟ್ ಆಗಿ ಕಾಣಬೇಕಿಲ್ಲ ಎಂದು ಆಕೆ ಅದನ್ನು ನಯವಾಗಿಯೇ ನಿರಾಕರಿಸಿದಳು. ಆದರೆ ಅದನ್ನು ಧರಿಸಿದಾಗ ಆಕೆಗೆ ಚೆನ್ನಾಗಿ ಕಾಣುತ್ತದೆ ಎನ್ನುವುದನ್ನು ಆಕೆ ನಂಬಲೇ ಇಲ್ಲ. ಆದ್ದರಿಂದ ಆಕೆಗೆ ಮನವರಿಕೆ ಮಾಡಲು ಕಳೆದ ಒಂದು ವಾರದಿಂದ ನಾನು ಅದನ್ನು ಧರಿಸುತ್ತಿದ್ದೇನೆ. ಆಕೆ ಯಾವಾಗ ಅದನ್ನು ಧರಿಸುತ್ತಾಳೆಯೋ ಆಗ ಆಕೆ ಚೆನ್ನಾಗಿ ಕಾಣುತ್ತಾಳೆ.
- ಹುಸೈನ್ ಮಿಯಾ (70)