ಪೊಲೀಸರು, ಆರೋಪಿಗಳೊಂದಿಗೆ ಶಾಮಿಲಾಗಿ ಹಣಮಾಡಲು ನೋಡುತ್ತಾರೆ: ವಿ.ಎಸ್ .ಅಚ್ಯುತಾನಂದನ್

ಪಾಲಕ್ಕಾಡ್,ಮಾ.10: ಆರೋಪಿಗಳೊಂದಿಗೆ ಶಾಮಿಲಾಗಿ ಪೊಲೀಸರು ತಮ್ಮ ಲಾಭವನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಕೇರಳ ಮಾಜಿ ಮುಖ್ಯಮಂತ್ರಿ ಹಾಗೂ ಆಡಳಿತ ಸುಧಾರಣಾ ಆಯೋಗದ ಈಗಿನ ಅಧ್ಯಕ್ಷ ವಿಎಸ್ ಅಚ್ಯುತಾನಂದನ್ ಹೇಳಿದ್ದಾರೆ.
ವಾಳಯಾರಿನಲ್ಲಿ ಮಕ್ಕಳನ್ನು ಆರೋಪಿಗಳು ಕ್ರೂರವಾಗಿ ಕೊಂದು ಹಾಕಿದ್ದಾರೆ. ಆದರೆ ಘಟನೆಯಲ್ಲಿ ಆರೋಪಿಗಳಿಗೆ ಅನುಕೂಲಕರ ನಿಲುವನ್ನು ಪೊಲೀಸರು ಸ್ವೀಕರಿಸಿದರು ಎಂದು ವಿಎಸ್ ಆರೋಪಿಸಿದ್ದಾರೆ. ಘಟನೆ ಬಗ್ಗೆ ಸರಿಯಾದ ರೀತಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಬೇಕಾಗಿದೆ.
ಬಾಲಕಿಯರ ಮನೆಯವರಿಗೆ ಸೂಕ್ತ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಶುಕ್ರವಾರ ಬೆಳಗ್ಗೆ ವಿಎಸ್ ಅಚ್ಯುತಾನಂದನ್ ಬಾಲಕಿಯರ ಮನೆಗೆ ಭೇಟಿ ನೀಡಿದ್ದಾರೆ. ತನ್ನ ಮಕ್ಕಳಿಗೆ ಆಗಿದ್ದು ಬೇರೆಯಾರಿಗೂ ಆಗದಿರಲಿ ಎಂದು ಬಾಲಕಿಯರ ತಾಯಿ ಹೇಳಿದರೆಂದು ವರದಿ ತಿಳಿಸಿದೆ.
Next Story