ಅಮರಿಂದರ್‌ಗೆ 75ನೇ ಹುಟ್ಟುಹಬ್ಬದ ಉಡುಗೊರೆಯಾಗಿ ಮುಖ್ಯಮಂತ್ರಿ ಹುದ್ದೆ.........?

ಚಂಡಿಗಡ,ಮಾ.11: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಕ್ಯಾ.ಅಮರಿಂದರ್ ಸಿಂಗ್ ಅವರು ಇಂದು ತನ್ನ 75ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಕಾಂಗ್ರೆಸ್ ಪಕ್ಷವು ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಮುಖ್ಯಮಂತ್ರಿ ಗದ್ದುಗೆಯನ್ನು ನೀಡಲಿದೆಯೇ ಎನ್ನುವುದು ಇನ್ನು 24 ಗಂಟೆಗಳಲ್ಲಿ ನಿಚ್ಚಳಗೊಳ್ಳಲಿದೆ.
ಈಗಿನ ಮತ ಎಣಿಕೆ ಮಾಹಿತಿಯಂತೆ ಕಾಂಗ್ರೆಸ್ ರಾಜ್ಯದಲ್ಲಿ 64 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ಸರಕಾರ ರಚಿಸಲು ಅದಕ್ಕೆ 59 ಸ್ಥಾನಗಳು ಸಾಕು
ಪತಿಯಾಳಾ ಮತ್ತು ಲಾಂಬಿ ಕ್ಷೇತ್ರಗಳಿಂದ ಸಿಂಗ್ ಸ್ಪರ್ಧಿಸಿದ್ದಾರೆ. ತನ್ನ ಸಾಂಪ್ರದಾಯಿಕ ಕ್ಷೇತ್ರ ಪಟಿಯಾಳಾದಲ್ಲಿ ಮುನ್ನಡೆಯಲ್ಲಿರುವ ಅವರ ಗೆಲುವು ನಿಶ್ಚಿತವಿದೆ, ಆದರೆ ಲಾಂಬಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪ್ರಕಾಶ ಸಿಂಗ್ ಬಾದಲ್‌ಗಿಂತ ಹಿಂದೆ ಬಿದ್ದಿದ್ದಾರೆ.
ಇಂದು ಸಂಜೆ ಪಟಿಯಾಳಾದ ತನ್ನ ಮೋತಿ ಬಾಗ್ ಅರಮನೆಯಲ್ಲಿ ಸಿಂಗ್ ಸಂಭ್ರಮವನ್ನಾಚರಿಸಲಿದ್ದಾರೆ. ಇದಕ್ಕೆ ಎರಡು ಕಾರಣಗಳಿವೆ. ಪತಿಯಾಳಾ ಕ್ಷೇತ್ರದಲ್ಲಿ ಗೆಲುವು ಮತ್ತು ಹಿಂದಿನ ಪತಿಯಾಳಾ ಸಂಸ್ಥಾನದ ಅತ್ಯಂತ ಹೆಚ್ಚು ಕಾಲ ಬದುಕಿರುವ ದೊರೆ ಎನ್ನುವುದು ಈ ಎರಡು ಕಾರಣಗಳಾಗಿವೆ.