ಗುಜರಾತ್‌ನಲ್ಲಿ ನಡೆದದ್ದು ಮಹಿಳೆಯ ಗೌರವಕ್ಕೆಸವಾಲು : ಶಾಹಿನಾ, ಫೌಝಿಯಾ

ತೃಕ್ಕರಿಪುರ,(ಕಾಸರಗೋಡು) ಮಾ.11: ಮಹಿಳಾ ದಿನದಲ್ಲಿ ಗುಜರಾತ್‌ನಲ್ಲಿ ಅನುಭವಿಸಿದ್ದು ಹೆಣ್ಣಿನ ಗೌರವಕ್ಕೆ ಸವಾಲಾದ ನಿಮಿಷಳಾಗಿವೆ ಎಂದು ಮಫ್ತಾ ಧರಿಸಿದ್ದಕ್ಕಾಗಿ ಪ್ರಧಾನ ಮಂತ್ರಿಯ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ತಡೆಹಿಡಿಯಲ್ಪಟ್ಟ ತೃಕ್ಕರಿಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿ.ಪಿ. ಫೌಝಿಯಾ,ಚೆಂಗಳ ಪಂಚಾಯತ್ ಅಧ್ಯಕ್ಷೆ ಶಾಹಿನಾ ಸಲೀಂ ಹೇಳಿದ್ದಾರೆ.
ಇವರಿಬ್ಬರೂ ಗುರುವಾರ ರಾತ್ರಿ ಊರಿಗೆ ಬಂದು ತಲುಪಿದರು. ಭದ್ರತಾ ಅಧಿಕಾರಿಗಳು ಹೇಳಿದಂತೆ ಕೇಳಿ ವಯನಾಡಿನ ಮುಪ್ಪೈನಾಡ್ ಪಂಚಾಯತ್ ಅಧ್ಯಕ್ಷೆ ಶಹರ್‌ಬಾನ್ ಮಫ್ತಾ ತೆಗೆದು ಸಮಾರಂಭದಲ್ಲಿ ಭಾಗವಹಿಸಿದ ಬೆನ್ನಿಗೆ ಇವರಿಗೂ ಪರ್ದಾ ಧರಿಸಿ ಒಳಗೆ ಹೋಗಲು ಸಾಧ್ಯವಿಲ್ಲ ಎಂದು ತಿಳಿಸಲಾಗಿತ್ತು.
ಆದರೆ ಕಾರ್ಯಕ್ರಮಕ್ಕೆ ಪರ್ದಾ ತೆಗೆದು ಭಾಗವಹಿಸುವ ಇಷ್ಟ ತಮಗಿಲ್ಲ ಎಂದು ಈ ಇಬ್ಬರು ಪಂಚಾಯತ್ ಅಧ್ಯಕ್ಷೆಯರು ಅಧಿಕಾರಿಗಳಿಗೆ ದಿಟ್ಟ ಉತ್ತರವನ್ನು ನೀಡಿದ್ದಾರೆ. ಆದ್ದರಿಂದ ಭದ್ರತಾ ಅಧಿಕಾರಿಗಳು ಪ್ರವೇಶ ದ್ವಾರದಿಂದ ದೂರ ನಿಲ್ಲಿಸಿದ್ದಾರೆ.
ಹತ್ತು ನಿಮಿಷದ ಬಳಿಕ ಪುನಃ ಕೇಳಿದಾಗ ಮಫ್ತಾ ಧರಿಸಿದವರಿಗೆ ಪ್ರವೇಶ ನೀಡಬಾರದೆಂದು ಸೂಚನೆ ನೀಡಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದರು. ಗೃಹಸಚಿವಾಲಯ ನೀಡಿದ ಗುರುತಿನ ಚೀಟಿ ತೋರಿಸಿದರೂ ಜನಪ್ರತಿನಿಧಿಗಳಾದ ತಮ್ಮನ್ನು ತಡೆದ್ದೇಕೆಂದು ಪ್ರಶ್ನಿಸಿದಾಗ ಮತ್ತಷ್ಟು ಅಧಿಕಾರಿಗಳು ಬಂದರು ಎಂದು ಶಾಹಿನಾ ತಿಳಿಸಿದರು. ಅರ್ಧಗಂಟೆ ಕಳೆದ ಬಳಿಕ ಮೊದಲ ಭದ್ರತಾ ಗೇಟಿನಿಂದ ಒಳಗೆ ಹೊಗಲು ಬಿಡಲಾಯಿತು. ಎರಡನೆ ಗೇಟಿನಲ್ಲಿ ಇನ್ನೂ ಹೆಚ್ಚು ಕಠಿಣ ತಪಾಸಣೆ ನಡೆಸಿದ್ದಾರೆ.
ನಿಮ್ಮ ಪ್ರಯಾಣದ ಹೊಣೆಯಿರುವ ಅಧಿಕಾರಿಗೆ ಫೋನ್ ಕರೆ ಮಾಡಿ ಖಚಿತಪಡಿಸಬೇಕೆಂದು ಹೇಳಿದಾಗ ಕಣ್ಣೂರ್ ಜಿಲ್ಲೆಯ ಹೊಣೆಯಿರು ವ ಅಧಿಕಾರಿಗೆ ಫೋನ್ ಮಾಡಿ ಸ್ಪಷ್ಟಪಡಿಸಲಾಯಿತು. ಆದರೂ ಒಳಗೆ ಹೋಗಲು ಬಿಡಲಿಲ್ಲ. ಸಂದರ್ಶಕ ಗ್ಯಾಲರಿಯಲ್ಲಿ ಕುಳಿತುಕೊಳ್ಳಲು ಅಧಿಕಾರಿಗಳು ಇಬ್ಬರಿಗೂ ಹೇಳಿದರು. ಆದರೆ ಅವರಿಬ್ಬರೂ ಅದನ್ನು ತಿರಿಸ್ಕರಿಸಿದಾಗ ಒಳಗೆ ಕಳುಹಿಸಬೇಕಾಗಿ ಬಂದಿತ್ತು. ಶುಚಿಕೋಣೆಗೆ ಹೋಗಿ ಮರಳುವಾಗಲೂ ಅಧಿಕಾರಿಗಳು ತಡೆದರು. ಅವರೊಡನೆ ವಾಗ್ವಾದ ಮಾಡಬೇಕಾಯಿತು. ಕೇರಳದ ತಂಡದೊಂದಿಗಲ್ಲದೆ ಬೇರೆಲ್ಲಿಯೂ ಕಾರ್ಯಕ್ರಮದಲ್ಲಿ ಕೂತುಕೊಳ್ಳುವುದಿಲ್ಲ ಎಂದು ಇಬ್ಬರೂ ಹಟ ಹಿಡಿದಾಗ ಕೊನೆಗೆ ಅಧಿಕಾರಿಗಳು ಮಣಿಯಬೇಕಾಯಿತು ಎಂದು ಶಾಹಿನಾ ತಿಳಿಸಿದ್ದಾರೆ.
ಮೊದಲ ದಿನ ಗುಜರಾತ್ ನ ಮಾದರಿ ಗ್ರಾಮ ಲೀಲಾಪೂರ್‌ಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಶಾಲೆ ಮತ್ತು ಅಂಗನವಾಡಿಗೆ ಕಟ್ಟಡ ಪ್ರಪ್ರಥಮ ಬಾರಿ ನಿರ್ಮಿಸಲಾಗುತ್ತಿದೆ. ಇದನ್ನು ಡಿಜಿಟಲ್ ಗ್ರಾಮ ಎಂದು ಕರೆಯುತಿದ್ದಾರೆ. ಅಂಗನವಾಡಿ ಮಕ್ಕಳನ್ನು ನೋಡಿದರೆ ನೋಡಿದವರು ಕೂಡಲೇ ಈ ಮಕ್ಕಳಿಗೆ ಪೋಷಕಾಹಾರದ ಕೊರತೆ ಇದೆ ಎಂದು ಹೇಳಬಹುದು ಎಂದು ಶಾಹಿನಾ ಹೇಳಿದರು.
ಕೇರಳದಿಂದ ಬಂದ ಹೆಚ್ಚಿನವರು ಮಾದರಿ ಗ್ರಾಮ ನೋಡಿ ಮೂಗಿಗೆ ಬೆರಳಿಟ್ಟರು. ಸಂಬಂಧಿಸಿದ ಅಧಿಕಾರಿಗಳು ಕೇರಳಕ್ಕೆ ಭೇಟಿ ನೀಡಿ ಎಂದು ಆಹ್ವಾನವನ್ನು ನೀಡಿದೆವು ಎಂದು ಶಾಹಿನಾ ತಿಳಿಸಿದ್ದಾರೆ. ದಿಲ್ಲಿಯ ಸಂಪೂರ್ಣ ಶುಚಿತ್ವ ಯೋಜನೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ಪರ್ದಾಧರಿಸಿಯೇ ತಾನು ಭಾಗವಹಿಸಿದ್ದೆ. ಆದರೆ ಅಲ್ಲಿ ಇಂತಹ ಕಷ್ಟಗಳು ಅನುಭವವಾಗಿರಲಿಲ್ಲ ಎಂದು ಫೌಝಿಯಾ ಹೇಳಿದರು.
ಗುಜರಾತ್‌ನಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿದ್ದ ಹಾಸ್ಟೆಲ್‌ಗಳು ಕೂಡಾ ಶುಚಿಯಾಗಿರಲಿಲ್ಲ ಎಂದು ಇಬ್ಬರು ಪಂಚಾಯತ್ ಅಧ್ಯಕ್ಷೆಯರು ತಮಗಾದ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದಾರೆಂದು ವೆಬ್‌ಪೋರ್ಟಲೊಂದು ವರದಿಮಾಡಿದೆ.







