ಲಾಂಬಿಯಲ್ಲಿ ಸೋತು ಪಟಿಯಾಲಾದಲ್ಲಿ ಗೆದ್ದ ಅಮರಿಂದರ್

ಚಂಡಿಗಡ,ಮಾ.11: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಭಾವ್ಯ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಲಾಂಬಿ ಕ್ಷೇತ್ರದಲ್ಲಿ ಸೋಲನ್ನಪ್ಪಿದ್ದಾ ರಾದರೂ ತನ್ನ ಸಾಂಪ್ರದಾಯಿಕ ಪಟಿಯಾಲಾ ಕ್ಷೇತ್ರದಲ್ಲಿ ಭಾರೀ ಅಂತರದೊಂದಿಗೆ ಗೆದ್ದಿದ್ದಾರೆ.
ಲಾಂಬಿ ಕ್ಷೇತ್ರದಲ್ಲಿ ಹಾಲಿ ಮುಖ್ಯಮಂತ್ರಿ, ಶಿರೋಮಣಿ ಅಕಾಲಿ ದಳದ ಪ್ರಕಾಶ ಸಿಂಗ್ ಬಾದಲ್ ಅವರು ಅಮರಿಂದರ್‌ರನ್ನು 22,770 ಮತಗಳಿಂದ ಪರಾಭವಗೊಳಿ ಸಿದ್ದಾರೆ. ಬಾದಲ್‌ಗೆ 66,375 ಮತ್ತು ಅಮರಿಂದರ್‌ಗೆ 43,605 ಮತಗಳು ಬಿದ್ದಿವೆ. ಆಪ್ ಅಭ್ಯರ್ಥಿ ಜರ್ನೈಲ್ ಸಿಂಗ್ ಅವರು 21,254 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಪಟಿಯಾಲದಲ್ಲಿ ಅಮರಿಂದರ್ ತನ್ನ ನಿಕಟ ಪ್ರತಿಸ್ಪರ್ಧಿ ಆಪ್‌ನ ಬಲ್ಬೀರ್ ಸಿಂಗ್ ಅವರನ್ನು 52,407 ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಅವರಿಗೆ 72,586 ಮತಗಳು ಮತ್ತು ಬಲ್ಬೀರ್‌ಗೆ 20,179 ಮತಗಳು ಬಿದ್ದಿವೆ. ಶಿರೋಮಣಿ ಅಕಾಲಿದಳದ ಅಭ್ಯರ್ಥಿ ಹಾಗೂ ಮಾಜಿ ಸೇನಾ ಮುಖ್ಯಸ್ಥ ಜೆ.ಜೆ.ಸಿಂಗ್ ಅವರಿಗೆ 11,677 ಮತಗಳು ಬಿದ್ದಿವೆ.
Next Story