ಗೋವಾದಲ್ಲಿ ಗರಿಷ್ಠ ‘ನೋಟಾ’ಚಲಾವಣೆ

ಹೊಸದಿಲ್ಲಿ,ಮಾ.11: ಕಣದಲ್ಲಿರುವ ಯಾವುದೇ ಅಭ್ಯರ್ಥಿಗೂ ಮತವನ್ನು ಚಲಾಯಿಸದ ಮತದಾರನ ಅಧಿಕಾರ(ನೋಟಾ)ವನ್ನು ಪಂಚರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಗೋವಾದ ಮತದಾರರು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಉತ್ತರಾಖಂಡದ ಮತದಾರರಿದ್ದಾರೆ.
ಗೋವಾದಲ್ಲಿ ಶೇ.1.2ರಷ್ಟು ಮತದಾರರು ವಿದ್ಯುನ್ಮಾನ ಯಂತ್ರದಲ್ಲಿ ನೋಟಾ ಗುಂಡಿಯನ್ನು ಒತ್ತಿದ್ದರೆ, ಉತ್ತರಾಖಂಡದಲ್ಲಿ ಇವರ ಪ್ರಮಾಣ ಶೇ.1ರಷ್ಟಿದೆ.
ಉತ್ತರ ಪ್ರದೇಶದಲ್ಲಿ ಶೇ.0.9, ಪಂಜಾಬ್‌ನಲ್ಲಿ ಶೇ.0.7 ಮತ್ತು ಮಣಿಪುರದಲ್ಲಿ ಶೇ.0.5 ಮತದಾರರು ನೋಟಾ ಚಲಾಯಿಸಿದ್ದಾರೆ.
Next Story