ಮಾ.14,15: ತ್ಯಾಗರಾಜೆ ಮಸೀದಿಯಲ್ಲಿ ಆಧ್ಯಾತ್ಮಿಕ ಸಂಗಮ, ವಾರ್ಷಿಕ ಸ್ವಲಾತ್ ಮಜ್ಲಿಸ್
ಪುತ್ತೂರು,ಮಾ.11: ತ್ಯಾಗರಾಜೆ ತಿಂಗಳಾಡಿ ನೂರುಲ್ ಹುದಾ ಜುಮ್ಮಾ ಮಸೀದಿ ಮತ್ತು ಯಂಗ್‌ಮೆನಸ್ ಎಸೋಸಿಯೇಶನ್ ಆಶ್ರಯದಲ್ಲಿ ‘ಆಧ್ಯಾತ್ಮಿಕ ಸಂಗಮ ಹಾಗೂ ವಾರ್ಷಿಕ ಸ್ವಲಾತ್ ಮಜ್ಲಿಸ್’ ಮಾ.14ರಂದು ಇಲ್ಲಿನ ಸೈಯದ್ ಫಕ್ರುದ್ದೀನ್ ತಂಙಳ್ ವೇದಿಕೆಯಲ್ಲಿ ನಡೆಯಲಿದೆ ಎಂದು ಮಸೀದಿಯ ಖತೀಬ್ ಜಾಬಿರ್ ಫೈಝಿ ಬನಾರಿ ತಿಳಿಸಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾ.14ರಂದು ತ್ಯಾಗರಾಜೆ ಮಸೀದಿ ಅಧ್ಯಕ್ಷ ಹಂಝ ಹಾಜಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ತ್ಯಾಗರಾಜೆ ಅಲ್ ಮದ್ರಸತುಲ್ ಖೌಲ ವಿದ್ಯಾರ್ಥಿಗಳಿಂದ ಬುರ್ದಾ ಆಲಾಪನೆ ನಡೆಯಲಿದೆ. ರಾತ್ರಿ ಶೈಖುನಾ ಅತ್ತಿಪ್ಪಟ್ಟ ಉಸ್ತಾದ್ ಅವರ ನೇತೃತ್ವದಲ್ಲಿ ಆಧ್ಯಾತ್ಮಿಕ ಸಂಗಮ ನಡೆಯಲಿದೆ. ಮಸೀದಿ ಗೌರವ ಅಧ್ಯಕ್ಷ ಅಬ್ದುರ್ರಹ್‌ಮಾನ್ ಕಬಕ ಅಧ್ಯಕ್ಷತೆ ವಹಿಸಲಿದ್ದಾರೆ. ಚಾಪಳ್ಳ ಮುದರ್ರಿಸ್ ಮುಹಮ್ಮದ್ ಆಶ್ರಫ್ ಫಾಝಿಲ್ ಬಾಖವಿ ಉದ್ಘಾಟನೆ ನಡೆಸಲಿದ್ದಾರೆ. ಝುಬೈರ್ ದಾರಿಮಿ ಪೈಕ ಕಾಸರಗೋಡು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಮಾ.15ರಂದು ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಅವರ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ಮಜ್ಲಿಸ್ ನಡೆಯಲಿದೆ. ಅಡ್ವೋಕೇಟ್ ಹನೀಫ್ ಹುದವಿ ದೇಲಂಪಾಡಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಸೀದಿಯ ಕಾರ್ಯದರ್ಶಿ ಸುಲೈಮಾನ್ ಪಟ್ಟೆ, ಸ್ವಾಗತ ಸಮಿತಿ ಅಧ್ಯಕ್ಷ ಇಬ್ರಾಹಿಂ ದರ್ಬೆ, ನೂರುಲ್ ಹುದಾ ಯಂಗ್‌ಮೆನ್ಸ್ ದುಬೈ ಸಮಿತಿ ಸದಸ್ಯ ಹಾಜಿ ಟಿ.ಎ. ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.





