ಕಾಂಗ್ರೆಸ್ ನ ಸೋಲಿಗೆ ಪ್ರಿಯಾಂಕಾಗಾಂಧಿ ಕೂಡಾ ಹೊಣೆ : ಸ್ಮೃ ತಿ ಇರಾನಿ

ಹೊಸದಿಲ್ಲಿ,ಮಾ.11: ಕೇಂದ್ರ ಸಚಿವೆ ಸ್ಮೃ ತಿ ಇರಾನಿ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಸೋಲು ಕೇವಲ ರಾಹುಲ್ ಗಾಂಧಿಯವರ ಸೋಲು ಮಾತ್ರವಲ್ಲ. ಇದರಲ್ಲಿ ಪ್ರಿಯಾಂಕಾಗಾಂಧಿಕೂಡಾ ಹೊಣೆಗಾರರು. ಯಾಕೆಂದರೆ ಅವರು ಚುನಾವಣಾ ತಂತ್ರದ ಭಾಗವಾಗಿದ್ದರು ಎಂದು ಹೇಳಿದ್ದಾರೆ.
ಕೇವಲ ರಾಹುಲ್‌ರನ್ನು ಮಾತ್ರ ದೂರುವುದು ನ್ಯಾಯವಲ್ಲ " ಈ ಕುರಿತು ನ್ಯಾಯೋಚಿತ ಮಾತುಗಳು ಕೇಳಿ ಬರಬೇಕು. ಇದು ಕೇವಲ ರಾಹುಲ್ ಗಾಂಧಿಯ ವೈಫಲ್ಯವಲ್ಲ. ಗುಲಾಮ್ ನಬಿ ಆಝಾದ್, ಪ್ರಿಯಾಂಕಾ ಕೂಡಾ ಚುನಾವಣಾ ರಣತಂತ್ರದ ಭಾಗವಾಗಿದ್ದಾರೆಂದು ಆಗಾಗ ಹೇಳುತ್ತಿದ್ದರು ಎಂದು ಸ್ಮೃ ತಿ ನೆಪಿಸಿದ್ದಾರೆ.
ಚುನಾವಣಾ ಫಲಿತಾಂಶಕ್ಕಾಗಿ ಪ್ರಿಯಾಂಕಾ ಗಾಂಧಿ ಕೂಡಾ ಸಮಾನ ಜವಾಬ್ದಾರರಾಗಿದ್ದಾರೆ. "ಗಂಗಾಮಾತೆಯ ಆಣೆಹಾಕಿ ಹೇಳಿರಿ. ಉತ್ತರ ಪ್ರದೇಶ ಯಾರನ್ನು ಇಚ್ಛಿಸುತ್ತದೆ ಹೇಳಿ ಎಂದು ಕಾಂಗ್ರೆಸ್ ಅಧ್ಯಕ್ಷೆಯೊಂದಿಗೆ ಅಖಿಲೇಶ್ ಯಾದವ್ ಶೈಲಿಯಲ್ಲಿ ಕೇಳಲು ಬಯಸುತ್ತಿದ್ದೇನೆ ಎಂದು ಇರಾನಿ ಹೇಳಿದ್ದಾರೆ.
ಮುಖ್ಯಮಂತ್ರಿ ವಿಚಾರದಲ್ಲಿ ಪ್ರಶ್ನಿಸಬೇಕಾಗಿಲ್ಲ. ಈ ವಿಷಯವನ್ನು ಪಕ್ಷದ ಸಂಸದೀಯ ಮಂಡಳಿ ನಿರ್ಧರಿಸಲಿದೆ ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ಬಿಜೆಪಿಯ ಗೆಲುವಿಗೆ ನರೇಂದ್ರ ಮೋದಿ ಸರಕಾರದ ಕೆಲಸಗಳು ಮತ್ತು ಪಕ್ಷದ ಅಧ್ಯಕ್ಷರ ಚುನಾವಣಾ ತಂತ್ರ ಕಾರಣವಾಗಿದೆ ಎಂದು ಸ್ಮೃ ತಿ ಹೇಳಿದರೆಂದು ವರದಿ ತಿಳಿಸಿದೆ.