ಚಿರತೆ ದಾಳಿ: ನಾಲ್ಕು ಕುರಿಗಳ ಸಾವು

ಚಿಕ್ಕಮಗಳೂರು, ಮಾ. 11: ಚಿರತೆಯೊಂದು ದಾಳಿ ನಡೆಸುವ ಮೂಲಕ ನಾಲ್ಕು ಕುರಿಗಳನ್ನು ಕೊಂದಿರುವ ಘಟನೆ ಕೊಪ್ಪ ತಾಲೂಕು ಕೇಂದ್ರದ ಗಾಂಧಿನಗರದ ಜನನಿಬಿಡ ಪ್ರದೇಶದಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಕೊಪ್ಪ ಪಟ್ಟಣದ ಗಾಂಧಿನಗರದ ಅಬ್ದುಲ್ ರಶೀದ್ ಎಂಬವರ ಮನೆಯ ಕುರಿಯ ಕೊಟ್ಟಿಗೆಯೊಳಗೆ ನುಗ್ಗಿರುವ ಚಿರತೆಯು ನಾಲ್ಕು ಕುರಿಗಳ ಮೇಲೆ ದಾಳಿ ನಡೆಸಿದೆ. ಕುರಿಗಳನ್ನು ಕೊಂದು ಎಳೆದಾಡಿ ಅರ್ದಂಬರ್ದ ತಿಂದು ಪರಾರಿಯಾಗಿದೆ.
ಸ್ಥಳಕ್ಕೆ ಕೊಪ್ಪ ವಲಯ ಅರಣ್ಯಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಚಿರತೆಯ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.
ಈ ಭಾಗದಲ್ಲಿ ಒಂದಕ್ಕಿಂತ ಹೆಚ್ಚು ಚಿರತೆಗಳ ಇದ್ದಿರುವ ಸಾದ್ಯತೆಯನ್ನು ಅವರು ಹೇಳಿಕೊಂಡಿದ್ದಾರೆ. ಪಟ್ಟಣದ ಮದ್ಯ ಭಾಗದಲ್ಲಿ ಬಂದು ಚಿಚಿ ಹೀಗೆ ದಾಳಿ ನಡೆಸಿರುವುದು ಸುತ್ತಮುತ್ತಲ ನಾಗರಿಕರಲ್ಲಿ ಭೀತಿ ಮೂಡಿಸಿದೆ.
Next Story





