ಶ್ವೇತಭವನಕ್ಕೆ ಭೇಟಿ ನೀಡಲು ಫೆಲೆಸ್ತೀನ್ ಅಧ್ಯಕ್ಷರಿಗೆ ಟ್ರಂಪ್ ಆಹ್ವಾನ

ವಾಶಿಂಗ್ಟನ್, ಮಾ. 11: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್‌ರನ್ನು ಶ್ವೇತಭವನಕ್ಕೆ ಆಹ್ವಾನಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಫೆಲೆಸ್ತೀನ್ ಅಧ್ಯಕ್ಷರ ಜೊತೆ ಮಾತನಾಡಿದ ವೇಳೆ ಈ ಆಹ್ವಾನ ನೀಡಿದರು.
‘‘ರಾಜಕೀಯ ಪ್ರಕ್ರಿಯೆಯನ್ನು ಪುನಾರಂಭಿಸುವ ಮಾರ್ಗಗಳ ಬಗ್ಗೆ ಚರ್ಚಿಸುವುದಕ್ಕಾಗಿ ಶೀಘ್ರವೇ ಶ್ವೇತಭವನಕ್ಕೆ ಭೇಟಿ ನೀಡುವಂತೆ ಅಧ್ಯಕ್ಷ ಟ್ರಂಪ್ ಅಧಿಕೃತವಾಗಿ ಅಧ್ಯಕ್ಷ ಅಬ್ಬಾಸ್‌ರನ್ನು ಆಹ್ವಾನಿಸಿದರು’’ ಎಂದು ಅಬ್ಬಾಸ್ ವಕ್ತಾರ ನಬಿಲ್ ಅಬು ರಡೈನಾ ತಿಳಿಸಿದರು.
ಶೀಘ್ರದಲ್ಲೇ ಶ್ವೇತಭವನಕ್ಕೆ ಬರುವಂತೆ ಟ್ರಂಪ್, ಅಬ್ಬಾಸ್‌ರನ್ನು ಆಹ್ವಾನಿಸಿದರು ಎಂದು ಬಳಿಕ ಶ್ವೇತಭವನದ ವಕ್ತಾರ ಸಿಯಾನ್ ಸ್ಪೈಸರ್ ವಾಶಿಂಗ್ಟನ್‌ನಲ್ಲಿ ಖಚಿತಪಡಿಸಿದರು.
Next Story





