ಸಾಲ ಮನ್ನಾ ಮಾಡಿದವರಿಗೆ ರೈತ ಸಂಘ ಬೆಂಬಲ
ಚಿತ್ರದುರ್ಗ, ಮಾ.11: ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಶ್ರೀನಿವಾಸ್ ಗದ್ದಿಗೆ ಅವರಿಗೆ ಅಖಂಡ ಕರ್ನಾಟಕ ರೈತ ಸಂಘದಿಂದ ಬೆಂಬಲ ನೀಡುವುದಾಗಿ ಶಾಂತ ಅಶೋಕ್ ನೀಡಿರುವ ಹೇಳಿಕೆಗೆ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ ಜಿ.ಎಸ್.ಕುರುಬರಹಳ್ಳಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಶಾಂತ ಅಶೋಕ್‌ಗೂ ಅಖಂಡ ಕರ್ನಾಟಕ ರೈತ ಸಂಘಕ್ಕೂ ಯಾವುದೇ ಸಂಬಂಧವಿಲ್ಲ. ಯಾವ ಪಕ್ಷ ರೈತರ ಐದು ಲಕ್ಷ ರೂ.ಸಾಲ ಮನ್ನಾ ಮಾಡಿ, ನೀರಾವರಿ ಯೋಜನೆಯನ್ನು ಜಾರಿಗೆ ತರುತ್ತದೋ ಆ ಪಕ್ಷಕ್ಕೆ ಮಾತ್ರ ಅಖಂಡ ಕರ್ನಾಟಕ ರೈತ ಸಂಘ ಬೆಂಬಲ ನೀಡುತ್ತದೆ. ಆದ್ದರಿಂದ ಶಾಂತ ಅಶೋಕ್‌ರವರ ಹೇಳಿಕೆಗೆ ಯಾರು ಗಮನ ಕೊಡಬಾರದು ಎಂದು ಕುರುಬರಹಳ್ಳಿ ಶಿವಣ್ಣ ಮನವಿ ಮಾಡಿದ್ದಾರೆ.
Next Story





