ಪಡುಬಿದ್ರಿ: ಬಸ್ ಢಿಕ್ಕಿ; ಸೈಕಲ್ ಸವಾರ ಸಾವು

ಪಡುಬಿದ್ರಿ, ಮಾ.11: ರಾಹೆ 66ರ ಉಚ್ಚಿಲದಲ್ಲಿ ಬೈಕೊಂದಕ್ಕೆ ಬಸ್ಸು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಮೃತನನ್ನು ಮೂಳೂರಿನ ಮಿಶನ್ ಕಂಪೌಂಡ್ ನಿವಾಸಿ ರಾಯ್ಲೆಟ್ ವೀರಾಜ್ (22) ಎಂದು ಗುರುತಿಸಲಾಗಿದೆ. ಪಾದಚಾರಿ ಬೆಳಪುವಿನ ಆರೀಫ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶನಿವಾರ ಕಾಲೇಜಿಗೆ ವೀರಾಜ್ ತಮ್ಮ ಪಲ್ಸರ್ ಬೈಕ್‌ನಲ್ಲಿ ತೆರಳುತಿದ್ದ ಸಂದರ್ಭದಲ್ಲಿ ಉಚ್ಚಿಲದ ಬಸ್ಸು ನಿಲ್ದಾಣದ ಬಳಿ ಖಾಸಗಿ ಬಸ್ಸು ಹಿಂಬದಿಯಿಂದ ಢಿಕ್ಕಿ ಹೊಡೆದಿದೆ.
ತೀವ್ರ ಗಾಯಗೊಂಡ ಇವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ರಾಯ್ಲೆಟ್ ವೀರಾಜ್ ಆಸ್ಪತ್ರೆ ಸಾಗಿಸುವ ವೇಳೆ ಕೊನೆಯುಸಿರೆಳೆದನು. ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.
Next Story





