ಬ್ರಹ್ಮಾವರ: ದೋಣಿಯೊಳಗೆ ಕುಸಿದು ಮೃತ್ಯು
ಬ್ರಹ್ಮಾವರ, ಮಾ.11: ಮೀನು ಹಿಡಿಯಲೆಂದು ದೋಣಿಯಲ್ಲಿ ಸ್ವರ್ಣ ನದಿಗೆ ತೆರಳಿದ ಮೀನುಗಾರರೊಬ್ಬರು ದೋಣಿಯೊಳಗೆ ಕುಸಿದು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಉಪ್ಪೂರು ಗ್ರಾಮದ ಅಮ್ಮುಂಜೆ ಕೆಳಕುದ್ರು ಹೊಯಿಗೆ ಧಕ್ಕೆ ಬಳಿ ನಡೆದಿದೆ.
ಮೃತರನ್ನು ತೆಂಕಬೆಟ್ಟು ಕೆಳಕುದ್ರು ಅಮ್ಮುಂಜೆಯ ಶೇಷ ಮರಕಾಲ (58) ಎಂದು ಗುರುತಿಸಲಾಗಿದೆ.
ಇವರು ನಿನ್ನೆ ರಾತ್ರಿ 9:00 ಗಂಟೆ ಸುಮಾರಿಗೆ ಸ್ವರ್ಣ ನದಿಯಲ್ಲಿ ಮೀನು ಹಿಡಿಯಲೆಂದು ತೆರಳಿದ್ದು, ದೋಣಿಯ ಸಣ್ಣ ತೂತಿನಲ್ಲಿ ನೀರು ದೋಣಿಯೊಳಗೆ ಬಂದು ಈ ವೇಳೆ ಶೇಷ ಮರಕಾಲ ನಿಶ್ಶಕ್ತಿ ಯಿಂದ ದೋಣಿಯೊಳಗೆ ಕುಸಿದು ಪ್ರಜ್ಞೆ ತಪ್ಪಿ ಅಲ್ಲೇ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





