ಉಳ್ಳಾಲ ಚೂರಿ ಇರಿತ ಪ್ರಕರಣ: ಇಬ್ಬರ ಬಂಧನ

ಉಳ್ಳಾಲ, ಮಾ. 11: ಉಳ್ಳಾಲದಲ್ಲಿ ಎರಡು ದಿನಗಳಹಿ ಹಿಂದೆ ನಡೆದ ಇಬ್ಬರು ವ್ಯಕ್ತಿಗಳ ಮೇಲೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಉಳ್ಳಾಲ ನಿವಾಸಿಗಳಾದ ಇಮ್ರಾನ್(23), ಹಂಝ(24) ಎಂದು ಗುರುತಿಸಲಾಗಿದೆ.
ಟಾರ್ಗೆಟ್ ತಂಡದಲ್ಲಿ ಗುರುತಿಸಿಕೊಂಡಿದ್ದ ಈ ಆರೋಪಿಗಳು ಗುರುವಾರ ರಾತ್ರಿ ವೇಳೆ ನಡಕೊಂಡು ಹೋಗುತ್ತಿದ್ದ ಸಿರಾಜ್ ಮತ್ತು ಶಮೀರ್ ಎಂಬವರ ಮೇಲೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದರು.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Next Story





