ಬೋಪಣ್ಣ-ಕ್ಯುವಾಸ್ ಜೋಡಿಗೆ ಸೋಲು
ಇಂಡಿಯನ್ ವೇಲ್ಸ್ ಟೆನಿಸ್ ಟೂರ್ನಿ

ಇಂಡಿಯನ್ ವೇಲ್ಸ್(ಅಮೆರಿಕ), ಮಾ.11: ಒಗ್ಗಟ್ಟಿನ ಪ್ರದರ್ಶನ ನೀಡಲು ವಿಫಲವಾಗಿರುವ ರೋಹನ್ ಬೋಪಣ್ಣ ಹಾಗೂ ಪಾಬ್ಲೊ ಕ್ಯುವಾಸ್ ಎಟಿಪಿ ಇಂಡಿಯನ್ ವೇಲ್ಸ್ ಟೆನಿಸ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ಸೋತು ಹೊರನಡೆದಿದ್ದಾರೆ.
ಇಲ್ಲಿ ಶನಿವಾರ ನಡೆದ ಪುರುಷರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಬೋಪಣ್ಣ-ಕ್ಯುವಾಸ್ ಜೋಡಿ ಸರ್ಬಿಯದ ನೊವಾಕ್ ಜೊಕೊವಿಕ್ ಹಾಗೂ ವಿಕ್ಟರ್ ಟ್ರೊಯಿಕಿ ವಿರುದ್ಧ 6-2, 3-6, 10-7 ಸೆಟ್‌ಗಳ ಅಂತರದಿಂದ ಶರಣಾದರು.
ಭಾರತದ ಬೋಪಣ್ಣ ಅವರು ಉರುಗ್ವೆಯ ಕ್ಯುವಾಸ್‌ರೊಂದಿಗೆ ಈ ಋತುವಿನಲ್ಲಿ ಮೂರನೆ ಟೂರ್ನಮೆಂಟ್‌ನಲ್ಲಿ ಆಡಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಾತ್ರ ಒಂದು ಪಂದ್ಯವನ್ನು ಜಯಿಸಲು ಸಮರ್ಥರಾಗಿದ್ದಾರೆ.
ಈ ವರ್ಷ ವಿಶ್ವದ 30ನೆ ರ್ಯಾಂಕಿನ ಆಟಗಾರ ಕ್ಯುವಾಸ್‌ರೊಂದಿಗೆ ಡಬಲ್ಸ್ ಪಂದ್ಯ ಆಡಲು ಆರಂಭಿಸಿದ್ದ ಬೋಪಣ್ಣ ಪ್ರಮುಖವಾಗಿ ಗ್ರಾನ್‌ಸ್ಲಾಮ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದರು. ಆದರೆ, ಈ ಜೋಡಿ ಅಪಿಯಾ ಇಂಟರ್‌ನ್ಯಾಶನಲ್ ಹಾಗೂ ಇಂಡಿಯನ್ ವೇಲ್ಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಮುಗ್ಗರಿಸಿದೆ.





