ಮಹಿಳೆಯರಿಗೆ ನೈತಿಕ ಸ್ಥೆರ್ಯ ನೀಡಲು ಮಹಿಳಾ ಠಾಣೆ ಸಹಕಾರಿ: ಸಚಿವ ರಮಾನಾಥ ರೈ

ಪುತ್ತೂರು, ಮಾ.11: ಮಹಿಳೆಯರು ಪುರುಷರಿಗಿಂತ ಹೆಚ್ಚು ಪ್ರಾಮಾಣಿಕರಾಗಿದ್ದು, ಅವರಿಗೆ ಸಂರಕ್ಷಣೆ ಮತ್ತು ಪ್ರಾಶಸ್ತ್ಯ ನೀಡುವುದು ಇಂದಿನ ಅನಿವಾರ್ಯತೆ ಯಾಗಿದೆ. ಮಹಿಳೆಯರಿಗೆ ನೈತಿಕ ಸ್ಥೆರ್ಯ ನೀಡಲು ಮಹಿಳಾ ಠಾಣೆ ಸಹಕಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಶನಿವಾರ ಪುತ್ತೂರಿನ ಸಂಚಾರ ಪೊಲೀಸ್ ಠಾಣಾ ಆವರಣದಲ್ಲಿ ನೂತನ ಮಹಿಳಾ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮೀಸಲಾತಿಯ ಮೂಲಕ ಮಹಿಳೆಯರಿಗೆ ಸಾಕಷ್ಟು ಅಕಾರ ಸ್ಥಾನಮಾನ ನೀಡಲಾಗಿದೆ. ಮಹಿಳೆಯರಲ್ಲಿ ಸ್ವಾಭಿಮಾನ ಬೆಳೆಯಲು, ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಲು, ಹೆಣ್ಣು ಮಕ್ಕಳಲ್ಲಿ ಶಕ್ತಿ ತುಂಬಲು ಅವರಿಗೆ ನೈತಿಕ ಬೆಂಬಲ ಅಗತ್ಯ. ಅತ್ಯಾಚಾರ, ಅನಾಚಾರ ಹೆಚ್ಚಾಗುತ್ತಿರುವ ಇಂದಿನ ಸಮಾಜದಲ್ಲಿ ಮಹಿಳೆಯ ಸರ್ವತೋಮುಖ ರಕ್ಷಣೆ ಪೊಲೀಸರ ಮೇಲಿದೆ ಎಂದರು. ಪೊಲೀಸರು ಎಂದೂ ಜಾತಿ, ಧರ್ಮ, ಕೋಮುವಾದ, ಮತೀಯ ಭಾವನೆಗೆ ಮನ್ನಣೆ ನೀಡದೆ ಎಲ್ಲ ಸಮಾಜದ ವಿಶ್ವಾಸ ಗಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ತಾನು 2014ರಲ್ಲಿಯೇ ಮಹಿಳಾ ಠಾಣೆಗೆ ಹಾಗೂ ಇಲಾಖೆಯಲ್ಲಿ ಶೇ.20ರಷ್ಟು ಮಹಿಳೆಯರನ್ನು ನೇಮಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಅದರಂತೆ ನಿರ್ಣಯ ಅಂಗೀಕಾರವಾಗಿತ್ತು. ನಮ್ಮ ಜಿಪಂ, ತಾಪಂ, ನಗರಸಭೆ, ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರೇ ಪ್ರತಿನಿಸುತ್ತಿದ್ದು, ಇದೀಗ ಮಹಿಳಾ ಠಾಣೆ ಮಂಜೂರುಗೊಂಡಿರುವುದು ಮಹಿಳೆಯರು ಹೆಮ್ಮೆ ಪಡುವ ವಿಚಾರ. ಇಲ್ಲಿ ಎಲ್ಲ ಮಹಿಳೆಯರಿಗೂ ನ್ಯಾಯ, ನೆಮ್ಮದಿಯ ಬದುಕು ಸಿಗುವಂತಾಗಲಿ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ತಾಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಪ್ರಕಾಶ್ ಕೌಶಲ್ ಶೆಟ್ಟಿ, ಹೆಚ್ಚುವರಿ ಪೊಲೀಸ್ ಅೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಪ್ರೊ.ಬಿ.ಜೆ.ಸುವರ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದ.ಕ. ಜಿಲ್ಲಾ ಪೊಲೀಸ್ ಅೀಕ್ಷಕ ಭೂಷಣ್ ಗುಲಾಬ್ ರಾವ್ ಬೊರಸೆ ವಂದಿಸಿದರು.







