Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪಂಜಾಬ್: ಆಪ್ ಮುಗ್ಗರಿಸಲು ಕಾರಣವಾದ 5...

ಪಂಜಾಬ್: ಆಪ್ ಮುಗ್ಗರಿಸಲು ಕಾರಣವಾದ 5 ಅಂಶಗಳು

ವಾರ್ತಾಭಾರತಿವಾರ್ತಾಭಾರತಿ11 March 2017 11:55 PM IST
share
ಪಂಜಾಬ್: ಆಪ್ ಮುಗ್ಗರಿಸಲು ಕಾರಣವಾದ 5 ಅಂಶಗಳು

ಪಂಜಾಬ್‌ನಲ್ಲಿ ಯಶಸ್ಸು ಸಾಧಿಸುವ ಆಮ್ ಆದ್ಮಿ ಪಾರ್ಟಿ(ಆಪ್)ಯ ಬಯಕೆ ಈಡೇರಿಲ್ಲ. ಅಲ್ಲಿ ಅಧಿಕಾರದ ಗದ್ದುಗೆಯನ್ನೇರಲು ಸಜ್ಜಾಗಿರುವ ಕಾಂಗ್ರೆಸ್ 77 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದು, ಕೇವಲ 20 ಸ್ಥಾನಗಳಲ್ಲಿ ಗೆದ್ದಿರುವ ಆಪ್ ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ದಿಲ್ಲಿಯಿಂದಲೇ ಪಂಜಾಬ್‌ನಲ್ಲಿ ಪಕ್ಷದ ಪ್ರಚಾರ ಕಾರ್ಯವನ್ನು ನಿಯಂತ್ರಿಸುತ್ತಿದ್ದ ನಾಯಕತ್ವವು ರಾಷ್ಟ್ರ ರಾಜಧಾನಿಯಿಂದ ಹೊರಗೆ ತನ್ನ ಛಾಪು ಮೂಡಿಸಲು ಪಕ್ಷವು ಹೊಂದಿದ್ದ ಬೃಹತ್ ಅವಕಾಶವನ್ನು ಹಾಳು ಮಾಡಿದಂತಿದೆ. ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಪೋಷಿಸಿಕೊಂಡು ಬರುತ್ತಿರುವ ಮತ್ತು ಅವುಗಳನ್ನು ಈಡೇರಿಸಿಕೊಳ್ಳುವ ಅವಸರದಲ್ಲಿರುವ ಆಪ್ ಪಂಜಾಬ್‌ನಲ್ಲಿ ಮಾಡಿದ ತಪ್ಪುಗಳು ಅದರ ಪಾಲಿಗೆ ತುಂಬ ದುಬಾರಿಯಾಗಿ ಪರಿಣಮಿಸಿವೆ.

ಹೊರಗಿನವರು ಎಂಬ ಹಣೆಪಟ್ಟಿ:

ತನ್ನ ಪ್ರಾದೇಶಿಕ ನಾಯಕರ ದೂರುಗಳನ್ನು ಬಗೆಹರಿಸಲು ಆಪ್ ನಾಯಕತ್ವ ತಲೆ ಕೆಡಿಸಿಕೊಂಡಿರಲಿಲ್ಲ. ದಿಲ್ಲಿಯಲ್ಲಿನ ಆಪ್ ನಾಯಕರು ಪಕ್ಷದ ಪಂಜಾಬ್ ಸಂಚಾಲಕ ಸುಚಾ ಸಿಂಗ್ ಛೊತ್ತೆಪುರ್ ಅವರನ್ನು ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಉಚ್ಚಾಟಿಸಿದ್ದರು. ಪಕ್ಷದ ಹೈಕಮಾಂಡ್ ಕೇಂದ್ರ ನಾಯಕರಾದ ಸಂಜಯ ಸಿಂಗ್ ಮತ್ತು ದುರ್ಗೇಶ ಪಾಠಕ್ ಅವರನ್ನು ಪಕ್ಷದ ರಾಜ್ಯ ಘಟಕದ ಮೇಲೆ ಹೇರಿದ್ದರ ವಿರುದ್ಧ ಛೊತ್ತೆಪುರ್ ಮತ್ತು ಅವರ ಬೆಂಬಲಿಗರು ದೂರಿಕೊಂಡಿದ್ದರು. ಈ ಇಬ್ಬರು ಸೇರಿಕೊಂಡು ಹೊರಗಿನವರನ್ನು ರಾಜ್ಯ ಘಟಕದ ಮೇಲೆ ಹೇರುತ್ತಿದ್ದಾರೆ ಎಂದು ಅವರು ಆಪಾದಿಸಿದ್ದರು. ಆಪ್‌ನ ಪ್ರಮುಖ ನಾಯಕರಾದ ಮತ್ತು ಚುನಾವಣೆಯಲ್ಲಿ ‘ಸಿಖ್ ಮುಖಗಳು’ ಆಗಿದ್ದ ಎಚ್.ಎಸ್.ಫೂಲ್ಕಾ ಮತ್ತು ಜರ್ನೈಲ್ ಸಿಂಗ್ ಇಬ್ಬರೂ ಪಂಜಾಬ್‌ನವರಾಗಿರದೆ ದಿಲ್ಲಿಯವರಾಗಿದ್ದರು. ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ-ಬಿಜೆಪಿ ಮೈತ್ರಿಕೂಟ ತಮ್ಮ ಚುನಾವಣಾ ಪ್ರಚಾರದಲ್ಲಿ ಆಪ್ ವಿರುದ್ಧ ‘ಹೊರಗಿನವರು’ಎಂಬ ಹಣೆಪಟ್ಟಿಯನ್ನು ಧಾರಾಳವಾಗಿ ಬಳಸಿಕೊಂಡಿದ್ದವು.

 ಮಾಲ್ವಾದ ಮೇಲೆ ಅತಿಯಾದ ಗಮನ:

69 ವಿಧಾನಸಭಾ ಕ್ಷೇತ್ರಗಳನ್ನೊಳಗೊಂ ಡಿರುವ ಮತ್ತು ಪಂಜಾಬ್‌ನಲ್ಲಿ ಅಧಿಕಾರ ಹಿಡಿಯುವಲ್ಲಿ ನಿರ್ಣಾಯಕವಾಗಿರುವ ಮಾಲ್ವಾ ಪ್ರದೇಶಕ್ಕೆ ಅತಿಯಾದ ಗಮನವನ್ನು ನೀಡಿದ್ದ ಆಪ್, ಒಟ್ಟು 48 (ಶೇ.40) ಸ್ಥಾನಗಳನ್ನು ಹೊಂದಿರುವ ಮಾಝಾ ಮತ್ತು ದೋಬಾ ಪ್ರದೇಶಗಳನ್ನು ಕಡೆಗಣಿಸಿತ್ತು. ಇದು ಪಕ್ಷದ ಸ್ಥಾನಗಳಿಕೆಯ ಮೇಲೆ ಪ್ರಭಾವ ಬೀರಿದೆ.

 ಸ್ಥಳೀಯ ನಾಯಕತ್ವಕ್ಕೆ ಅಗೌರವ:

ದಿಲ್ಲಿಯ ಆಪ್ ನಾಯಕರ ತಿರಸ್ಕಾರಕ್ಕೆ ಗುರಿಯಾಗಿದ್ದವರು ಛೊತ್ತೆಪುರ್ ಮತ್ತು ಅವರ ಬೆಂಬಲಿಗರು ಮಾತ್ರವಲ್ಲ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಪಂಜಾಬ್‌ನಿಂದ ಆಯ್ಕೆಯಾಗಿದ್ದ ಪಕ್ಷದ ನಾಲ್ವರು ಸಂಸದರ ಪೈಕಿ ಧರ್ಮವೀರ ಗಾಂಧಿ (ಪಟಿಯಾಲ) ಮತ್ತು ಹರಿಂದರ್ ಸಿಂಗ್ ಖಾಲ್ಸಾ (ಫತೇಗಡ ಸಾಹಿಬ್) ಅವರನ್ನು ಕ್ಷುಲ್ಲಕ ಭಿನ್ನಾಭಿಪ್ರಾಯಗಳಿಂದಾಗಿ ಆಪ್ ಪಕ್ಷದಿಂದ ಅಮಾನತುಗೊಳಿಸಿತ್ತು. ಅವರು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಆಪ್ ಆರೋಪಿಸಿದ್ದರೆ, ಕೇಂದ್ರ ನಾಯಕತ್ವವು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ ಎದು ಅವರು ಪ್ರತ್ಯಾರೋಪಿಸಿದ್ದರು. ಕಾಂಗ್ರೆಸ್ ಪಕ್ಷವು ಅಮರೀಂದರ್ ಸಿಂಗ್ ಅವರ ನೇತೃತ್ವದ ತನ್ನ ಸ್ಥಳೀಯ ನಾಯಕತ್ವವನ್ನು ಸಂಪೂರ್ಣವಾಗಿ ಬೆಂಬಲಿಸಿ ಸಂಪೂರ್ಣ ಲಾಭವನ್ನು ಪಡೆದುಕೊಂಡಿದೆ.

 ಅಂತಃಕಲಹ:

2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿನ ಆಡಳಿತ ವಿರೋಧಿ ಅಲೆಯ ಲಾಭವನ್ನು ಪಡೆದುಕೊಂಡಿದ್ದ ಆಪ್ 13 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 2017ರ ಚುನಾವಣೆಗಾಗಿ ಆಪ್ ಆಗಿನಿಂದಲೇ ಪ್ರಚಾರ ಅಭಿಯಾನವನ್ನು ಆರಂಭಿಸಿದ್ದು, ಹೊಸ ಪಕ್ಷದಲ್ಲಿ ನಂಬಿಕೆ ಯಿರಿಸಲು ಪಂಜಾಬ್ ಕೂಡ ಒಲವು ತೋರಿಸಿತ್ತು. ಆದರೆ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಪಕ್ಷದಲ್ಲಿ ಅಂತಃಕಲಹಗಳು ಭುಗಿಲೆದ್ದಿದ್ದವು.

 ಸಿಧು ಜೊತೆ ಮೈತ್ರಿ ವೈಫಲ್ಯ:

ಪಕ್ಷಕ್ಕೆ ಸೇರುವಂತೆ ಬಿಜೆಪಿ ನಾಯಕರಾಗಿದ್ದ ನವಜೋತ ಸಿಂಗ್ ಸಿಧು ಅವರನ್ನು ಓಲೈಸಿದ್ದ ಆಪ್ ಬಳಿಕ ಅವರನ್ನು ದೂರ ಮಾಡಿತ್ತು. ಸಿಧು ಜೊತೆಗೆ ಶಾಸಕರಾದ ನವಜೋತ್ ಕೌರ್ ಮತ್ತು ಪರ್ಗತ್ ಸಿಂಗ್ ಅವರನ್ನೂ ಆಪ್ ಕಳೆದುಕೊಂಡಿತ್ತು. ಸಿಧು ಜೊತೆ ಮೈತ್ರಿ ಸಾಧ್ಯವಾಗಿದ್ದರೆ ಅದು ಮಾಝಾ ಪ್ರದೇಶದಲ್ಲಿ ಆಪ್‌ಗೆ ಖಂಡಿತವಾಗಿಯೂ ನೆರವಾಗುತ್ತಿತ್ತು. ಮಾಝಾ ಪ್ರದೇಶದ ಅಮೃತಸರ ಕ್ಷೇತ್ರದಿಂದ ಸಿಧು ಮೂರು ಬಾರಿ ಗೆದ್ದಿದ್ದು, ಸಾಕಷ್ಟು ಪ್ರಭಾವ ಹೊಂದಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X