ವೃಕ್ಷ ಬಿಸಿನೆಸ್ ಸೊಲ್ಯೂಶನ್ಸ್‌ನಿಂದ ವಂಚನೆ: ನ್ಯಾಯಕ್ಕೆ ಆಗ್ರಹ
ಮಂಗಳೂರು, ಮಾ.11: ಹಣಕಾಸಿನ ವಿಚಾರದಲ್ಲಿ ಹಲವು ಏಜೆಂಟರಿಗೆ ವಂಚನೆ ಎಸಗಿರುವ ವೃಕ್ಷ ಬಿಸಿನೆಸ್ ಸೊಲ್ಯೂಶನ್ಸ್‌ನಿಂದ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಹಾಗಾಗಿ ತಕ್ಷಣ ಪರಿಹಾರ ನೀಡಬೇಕು ಎಂದು ಸಂತ್ರಸ್ತ ಏಜೆಂಟರು ಆಗ್ರಹಿಸಿದ್ದಾರೆ.
ತುಳುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏಜೆಂಟ್ ಫೌಝಿಯಾ, ಮನೆ ಮನೆಗೆ ಹೋಗಿ ಹಣ ಸಂಗ್ರಹಿಸಿ ಸಂಸ್ಥೆಗೆ ಕಟ್ಟಲಾಗಿದೆ. ಇದೀಗ ಸಂಸ್ಥೆಯ ಮೋಸದಿಂದಾಗಿ ಹಣ ಕಳೆದುಕೊಂಡವರಿಗೆ ಏಜೆಂಟರು ಉತ್ತರ ಕೊಡಬೇಕಾಗಿದೆ ಎಂದರು.
ಏಜೆಂಟ್ ರಾಮ ಎಸ್. ಬಂಗೇರ ಮಾತನಾಡಿ, ನಮ್ಮ ನಿರಂತರ ಹೋರಾಟದ ಬಳಿಕ ಮಾಲಕರನ್ನು ಬಂಸಿದ್ದರೂ ಇದೀಗ ಬಿಡುಗಡೆಗೊಳಿಸಲಾಗಿದೆ. ‘ಹಣ ಕೊಡುವುದಿಲ್ಲ. ಏನು ಮಾಡುತ್ತೀರೋ ಮಾಡಿ’ ಎಂದು ಮಾಲಕರು ಹೆದರಿಸುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಸುದ್ದಿಗೋಷ್ಠಿಯಲ್ಲಿ ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಏಜೆಂಟರಾದ ಸಬೀನಾ, ಸುನೀತಾ ಮತ್ತಿತರರು ಉಪಸ್ಥಿತರಿದ್ದರು.
Next Story





