ಪಡುಕೆರೆ ಬೀಚ್ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ: ಸಚಿವ ಪ್ರಮೋದ್

ಉಡುಪಿ, ಮಾ.11: ಈವರೆಗೆ ಜನರಿಂದ ದೂರ ಉಳಿದು ತನ್ನ ಮೂಲ ಸೌಂದರ್ಯವನ್ನು ಉಳಿಸಿಕೊಂಡಿರುವ ಮಲ್ಪೆ ಪಡುಕೆರೆ ಬೀಚ್‌ನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಂದರ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಡ್ರೋನ್‌ನ ಸಹಾಯದಿಂದ ಮೇಲಿಂದ ಜಿಲ್ಲೆಯ ಉಡುಪಿ, ಮಣಿಪಾಲ, ಮಲ್ಪೆ, ಕಾರ್ಕಳ, ಬಾರಕೂರು ಪರಿಸರದ ಛಾಯಾಗ್ರಹಣ ನಡೆಸಿರುವ ನಾಡಿನ ಖ್ಯಾತ ನಾಮ ಛಾಯಾಗ್ರಾಹಕರಾದ ಆಸ್ಟ್ರೋ ಮೋಹನ್ ಹಾಗೂ ಅರುಣ್ ಮಹೇಂದ್ರಕರ್ ಅವರು ಕುಂಜಿಬೆಟ್ಟಿನ ಗ್ಯಾಲರಿ ಅದಿತಿಯಲ್ಲಿ ಏರ್ಪಡಿಸಿದ ತಮ್ಮ ಈ ಅಪೂರ್ವ ಸಂಗ್ರಹ ಗಳ ಪ್ರದರ್ಶನ ರಿಯಲ್ ಉಡುಪಿೞಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಹಿರಿಯ ಪತ್ರಿಕಾ ಸಂಪಾದಕಿ ಸಂಧ್ಯಾ ಪೈ, ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ವಿಷ್ಣುವರ್ಧನ್, ಉದ್ಯಮಿ ಮನೋಹರ್ ಶೆಟ್ಟಿ ಹಾಗೂ ಅರುಣ್ ಮಹೇಂದ್ರಕರ್ ಉಪಸ್ಥಿತರಿದ್ದರು.
ಅದಿತಿ ಗ್ಯಾಲರಿಯ ಟ್ರಸ್ಟಿ ಆಸ್ಟ್ರೋ ಮೋಹನ್ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಟ್ರಸ್ಟಿ ಡಾ.ಕಿರಣ್ ಆಚಾರ್ಯ ವಂದಿಸಿದರು.







