ರೈಲು ಚಾಲಕನ ಸಮಯಪ್ರಜ್ಞೆ; ತಪ್ಪಿದ ಭಾರಿ ರೈಲು ದುರಂತ

ಹುಬ್ಬಳ್ಳಿ , ಮಾ.12: ವಿಜಯಪುರದ ಅಲಿಯಾಬಾದ್ ನಲ್ಲಿ ರೈಲು ಹಳಿ ಬಿರುಕುಬಿಟ್ಟು ಇಂದು ಸಂಭವಿಸಬಹುದಾಗಿದ್ದ ವಿಜಯಪುರ -ಹುಬ್ಬಳ್ಳಿ ಭಾರಿ ರೈಲು ದುರಂತ ರೈಲು ಚಾಲಕನ ಸಮಯಪ್ರಜ್ಞೆಯಿಂದಾಗಿ ತಪ್ಪಿದೆ.
ವಿಜಯಪುರದಿಂದ ಹುಬ್ಬಳ್ಳಿ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ರೈಲು ಚಾಲಕ ರೈಲನ್ನು ನಿಲ್ಲಿಸಿದರು. ಅಲಿಯಾಬಾದ್ ನಲ್ಲಿ ಬಿರುಕು ಬಿಟ್ಟರೈಲು ಹಳಿಯನ್ನು ದುರಸ್ತಿ ಮಾಡಿದ ಬಳಿಕ ನಲುವತ್ತೈದು ನಿಮಿಷ ತಡವಾಗಿ ರೈಲು ಹುಬ್ಬಳ್ಳಿಗೆ ತೆರಳಿತು. ರೈಲು ಚಾಲಕನ ಸಮಯ ಪ್ರಜ್ಞೆಯ ಬಗ್ಗೆ ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Next Story





