ಗುರುವಾಯನಕೆರೆ: ಶಾಲಾ ವಾಹನ ಚಾಲಕ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಬೆಳ್ತಂಗಡಿ, ಮಾ.12: ವ್ಯಕ್ತಿಯೊಬ್ಬರ ಮೃತದೇಹವು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾದ ಘಟನೆ ಗುರುವಾಯನಕೆರೆಯಿಂದ ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಪದ್ಮನಾಭ(36) ಎಂದು ಗುರುತಿಸಲಾಗಿದೆ. ಇವರು ಶಾಲಾ ವಾಹನವೊಂದರ ಚಾಲಕರಾಗಿದ್ದರು. ಇಂದು ಮುಂಜಾನೆ ಅವರ ಮೃತದೇಹವು ರಸ್ತೆ ಬದಿಯ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





