ಉತ್ತರ ಪ್ರದೇಶದ ಶಾಸಕ ರಾಜ ಭೈಯ್ಯಾ ವಿರುದ್ಧ ಕೊಲೆ ಪ್ರಕರಣ ದಾಖಲು

ಲಕ್ನೋ, ಮಾ.12: ಪೊಲೀಸ್ ಅಧಿಕಾರಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಸಾಕ್ಷಿಯಾಗಿದ್ದ 25ರ ಹರೆಯದ ಯುವಕ ಯೋಗೇಂದ್ರ ಯಾದವ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಆತನ ವಾಹನಕ್ಕೆ ಟ್ರಕ್ ನ್ನು ಗುದ್ದಿಸಿ ಕೊಲೆ ಮಾಡಿರುವುದಾಗಿ ವಿವಾದಾತ್ಮಕ ಕುಂದ ಶಾಸಕ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜ ಭೈಯ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ.
ಶುಕ್ರವಾರ ರಾತ್ರಿ ಅರ್ಕಾ ಗ್ರಾಮದ ಬಳಿ ದ್ವಿಚಕ್ರ ವಾಹನಕ್ಕೆ ಟ್ರಕ್ ಡಿಕ್ಕಿಯಾದ ಕಾರಣದಿಂದಾಗಿ ದ್ವಿಚಕ್ರ ಸವಾರ ಯೋಗೇಂದ್ರ ಯಾದವ್ ಅವರ ಮೃತಪಟ್ಟಿದ್ದರು. ಆದರೆ ಇದು ಅಪಘಾತವಲ್ಲ. ಯೋಗೇಂದ್ರ ಯಾದವ್ ನಲ್ಲಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಶಾಸಕ ರಾಜ ಭೈಯ್ಯಾ, ಅವರ ದಾಯಾದಿ ಹಾಗೂ ವಿಧಾನ ಪರಿಷತ್ ಸದಸ್ಯ ಅಕ್ಷಯ್ ಪ್ರತಾಪ್ ಸಿಂಗ್ , ವ್ಯವಸ್ಥಾಪಕ ನಿರ್ದೇಶಕ ನಾನ್ಹೇ ಸಿಂಗ್, ಚಾಲಕ ಸಂಜಯ್ ಪ್ರತಾಪ್ ಸಿಂಗ್ ಮತ್ತು ಟ್ರಕ್ ಚಾಲಕನ ವಿರುದ್ಧ ದೂರು ದಾಖಲಾಗಿದೆ.
2013 ರಲ್ಲಿ ಸರ್ಕಲ್ ಅಧಿಕಾರಿ ಝಿಯಾ ಉಲ್ ಹಕ್ ಅವರ ಸಾವಿನ ಪ್ರಕರಣದಲ್ಲಿ ಯೋಗೇಂದ್ರ ಯಾದವ್ ಪ್ರಮುಖ ಸಾಕ್ಷಿಯಾಗಿದ್ದರು. ಎರಡು ಗುಂಪುಗಳ ನಡುವಿನ ಜಗಳವನ್ನು ತಡೆಯಲು ಹೋಗಿದ್ದ ಹಕ್ ಅವರನ್ನು ಹೊಡೆದು ಸಾಯಿಸಲಾಗಿತ್ತು. ಈ ಪ್ರಕರಣವನ್ನುಇದೀಗ ಸಿಬಿಐ ತನಿಖೆ ನಡೆಸುತ್ತಿದೆ