ದಮ್ಮಾಮ್: ಹನೀಫಿ ಸನದುದಾನ ಪ್ರಚಾರ ಸಮ್ಮೇಳನ

ದಮ್ಮಾಮ್, ಮಾ.12: ಸುರಿಬೈಲ್‌ನ ದಾರುಲ್ ಅಶ್ ಅರಿಯದ ದಮ್ಮಾಮ್ ಘಟಕದ ವತಿಯಿಂದ ಹನೀಫಿ ಸನದುದಾನ ಪ್ರಚಾರ ಸಭೆಯು ಇಲ್ಲಿನ ಸಫಾ ಆಡಿಟೋರಿಯಂನಲ್ಲಿ ಗುರುವಾರ ರಾತ್ರಿ ನಡೆಯಿತು.
ಸೈಯದ್ ತ್ವಾಹ ತಂಙಳ್ ಮದನಿ ದುಆ ನೆರವೇರಿಸಿದರು. ಐಸಿಎಫ್ ದಮ್ಮಾಮ್ ಅಧ್ಯಕ್ಷ ಅಬ್ದುಲ್ ಲತೀಫ್ ಅಹ್ಸನಿ ಕಾರ್ಯಕ್ರಮ ಉದ್ಘಾಟಿಸಿದರು.
ದಾರುಲ್ ಅಶ್ ಅರಿಯ ಜನರಲ್ ಮ್ಯಾನೇಜರ್ ಮುಹಮ್ಮದ್ ಅಲಿ ಸಖಾಫಿ ಮುಖ್ಯ ಭಾಷಣ ಮಾಡಿದರು. ಇದೇ ವೇಳೆ ಮುಹಮ್ಮದ್ ಅಲಿ ಸಖಾಫಿಯವರನ್ನು ಅಶ್ ಅರಿಯ ದಮ್ಮಾಮ್ ಘಟಕದ ವತಿಯಂದ ಹಾಗೂ ಕೆಸಿಎಫ್ ದಮ್ಮಾಮ್ ಘಟಕದ ಪರವಾಗಿ ಘಟಕದ ಅಧ್ಯಕ್ಷ ಹಬೀಬ್ ಸಖಾಫಿ ನೇತೃತ್ವದಲ್ಲಿ ಅಭಿನಂದಿಸಲಾಯಿತು. ಅಬ್ದುಲ್ ರಹ್ಮಾನ್ ಮದನಿ ಉರ್ನಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಕೊಪ್ಪ ಸಿಎಂ ಸೆಂಟರ್‌ನ ಪ್ರದಾನ ಕಾರ್ಯದರ್ಶಿ ಬಶೀರ್ ಸಅದಿ ಕೊಡಗು, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಮಾಜಿ ಅಧ್ಯಕ್ಷ ಯೂಸುಫ್ ಸಅದಿ ಅಯ್ಯಂಗೇರಿ, ಕೆಸಿಎಫ್ ಮುಖಂಡ ಅಬ್ದುಲ್ಲ ಹಾಜಿ ಎನ್.ಎಸ್., ಕೆಸಿಎಫ್ ಸೌದಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉಮರುಲ್ ಫಾರೂಕ್ ಕಾಟಿಪಳ್ಳ, ಅಶ್‌ಅರಿಯ ದಮ್ಮಾಮ್ ಸ್ವಾಗತ ಸಮಿತಿಯ ಅಧ್ಯಕ್ಷ ಖಾಸಿಂ ಹಾಜಿ ಅಡ್ಡೂರು, ಅಶ್‌ಅರಿಯ ದಮ್ಮಾಮ್ ಗೌರವಾಧ್ಯಕ್ಷ ಪಿ.ಸಿ.ಅಬೂಬಕರ್ ಸಅದಿ, ಮುಹಿಮ್ಮಾತ್ ದಮ್ಮಾಮ್ ಘಟಕಾಧ್ಯಕ್ಷ ಮೊಯ್ದಿನ್ ಹಾಜಿ ಕೊಡಿಯಮ್ಮ, ಇಬ್ರಾಹೀಂ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.
ಇದೇವೇಳೆ ಕೆಸಿಎಫ್ ದಮ್ಮಾಮ್ ಘಟಕದ ಸದಸ್ಯತ್ವ ಅಭಿಯಾನದ ಪ್ರಥಮ ಪ್ರತಿಯನ್ನು ಫಾರೂಕ್ ಕಾಟಿಪಳ್ಳರವರು ಬಶೀರ್‌ರವರಿಗೆ ನೀಡಿ ನೋಂದಾಯಿಸಲಾಯಿತು.
ಇಕ್ಬಾಲ್ ಮಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಲತೀಫ್ ಪಳ್ಳತ್ತಡ್ಕ ಸ್ವಾಗತಿಸಿದರು. ಮುಹಮ್ಮದ್ ಸಖಾಫಿ ತಲಕ್ಕಿ ಕಿರಾಅತ್ ಪಠಿಸಿದರು.
ಪ್ರದಾನ ಕಾರ್ಯದರ್ಶಿ ಇಕ್ಬಾಲ್ ಕೈರಂಗಳ ವಂದಿಸಿದರು







