ಮಸ್ಕತ್: ಡಿಕೆಯಸಿ ವತಿಯಿಂದ ಮಾ.17ರಂದು 'ಎಜುಕೇಶನ್ ಮೀಟ್ - 2017'

ಮಸ್ಕತ್, ಮಾ.12: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ - ಮಂಗಳೂರು ಇದರ ಅಧೀನದಲ್ಲಿರುವ ಅಲ್ ಇಹಸಾನ್ ಎಜುಕೇಶನ್ ಸೆಂಟರ್, ಇದರ ವತಿಯಿಂದ ಮಾ.17ರಂದು ಒಮಾನ್ ನಲ್ಲಿ 'ಎಜುಕೇಶನ್ ಮೀಟ್ -2017' ಮಸ್ಕತ್ ನ ವಾದಿ ಕಬೀರ್ ನಲ್ಲಿರುವ ಕ್ರಿಸ್ಟಲ್ ಸುಯಿಟ್ಸ್ ಹೋಟೆಲ್ ಸಭಾಂಗಣದಲ್ಲಿ ರಾತ್ರಿ 8:30 ಕ್ಕೆ ಜರಗಲಿದೆ.
ಕಾರ್ಯಕ್ರಮವು ಅಲ್ ಹಾಜ್ ಅಸ್ಸಯಿದ್ ಆಟಕೋಯ ತಂಗಳ್ (ಅಧ್ಯಕ್ಷರು ಡಿಕೆಯಸಿ) ರವರ ಅಧ್ಯಕ್ಷತೆಯಲ್ಲಿ ಜರುಗಲಿರುವುದು.
ಕಾರ್ಯಕ್ರಮದ ಉದ್ಘಾಟನೆಯನ್ನು ಯು. ಟಿ. ಅಬ್ದುಲ್ ಖಾದರ್ ಮಾನ್ಯ ಮಂತ್ರಿಗಳು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕರ್ನಾಟಕ ನೆರವೇರಿಸಲಿದ್ದಾರೆ.
ಗೌರವ ಅತಿಥಿಯಾಗಿ ಸಯ್ಯದ್ ಅಬ್ದುಲ್ ರಹಮಾನ್ ತಂಗಳ್ , ಅಬ್ದುಲ್ ಲತೀಫ್ (ವ್ಯವಸ್ಥಾಪಕ ನಿರ್ದೇಶಕ ಬದ್ರ್ ಅಲ್ ಸಮಾ ಆಸ್ಪತ್ರೆ ಮಸ್ಕತ್ ), ಮುಸ್ತಫಾ ಸಾದಿ ಕುಕ್ಕಟ್ಟೆ , ಉಳ್ಳಾಲ ( ಮ್ಯಾನೇಜರ್ ಅಲ್ ಇಹಸಾನ್ ಎಜುಕೇಶನ್ ಸೆಂಟರ್ ) ಭಾಗವಹಿಸಲಿದ್ದಾರೆ ಎಂದು ಡಿಕೆಯಸಿ ಒಮಾನ್ ಘಟಕದ ಅಧ್ಯಕ್ಷರಾದ ಮೋನಬ್ಬ ಅಬ್ದುಲ್ ರಹ್ಮಾನ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





