ಬಿಜೆಪಿಯ ವಿಜಯ ನೋಟು ರದ್ದತಿಯನ್ನು ವಿರೋಧಿಸಿದವರಿಗೆ ಉತ್ತರ: ಸುರೇಶ್ ಗೋಪಿ

ಕಲ್ಲಿಕೋಟೆ,ಮಾ. 12: ಬಿಜೆಪಿಯ ಚುನಾವಣೆ ವಿಜಯ ನೋಟು ಅಮಾನ್ಯಗೊಳಿಸಿರುವುದನ್ನು ವಿರೋಧಿಸಿದವರಿಗೆ ನೀಡಿದ ಉತ್ತರವಾಗಿದೆ ಎಂದು ನಟ, ರಾಜ್ಯಸಭಾಸದಸ್ಯ ಸುರೇಶ್ ಗೋಪಿ ಹೇಳಿದ್ದಾರೆ. ಉತ್ತರ ಪ್ರದೇಶ ಸಹಿತ ಇತರ ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶ ನೋಟು ಅಮಾನ್ಯಗೊಳಿಸಿದ್ದನ್ನು ವಿರೋಧಿಸಿದ ಕೇರಳದ ಕೆಟ್ಟ ರಾಜಕೀಯದ ವಿರುದ್ಧ ವಿಜಯವಾಗಿದೆ ಎಂದು ಸುರೇಶ್ ಗೋಪಿ ಹೇಳಿದ್ದಾರೆ.
ಈ ಹಿಂದೆ ನೋಟು ನಿಷೇಧ ಘೋಷಿಸಿದ ಸಮಯದಲ್ಲಿ ಸುರೇಶ್ ಗೋಪಿ ಹಣ ಬದಲಾಯಿಸಲು ಜನರು ಗುಂಪಾಗಿ ಬ್ಯಾಂಕ್‌ಗೆ ಹೋಗಬೇಕಾಗಿಲ್ಲ. ಅದಕ್ಕೆ ಇನ್ನೂ ಸಮಯ ವಿದೆ ಎಂದು ಹೇಳಿದ್ದರು ಎಂದು ವರದಿ ತಿಳಿಸಿದೆ.
Next Story