ನವಜೋತ್ ಬಗ್ಗೆ ರಾಹುಲ್ ನಿರ್ಧಾರ: ಅಮರಿಂದರ್

ಚಂಡಿಗಡ,ಮಾ.12: ತಾನು ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗುವವರೆಗೆ ನವಜೋತ ಸಿಂಗ್ ಸಿಧು ಅವರ ಪಾತ್ರದ ಬಗ್ಗೆ ಯಾವುದೇ ಊಹಾಪೋಹ ಬೇಡ. ಅವರ ಪಾತ್ರವೇನು ಎನ್ನುವುದನ್ನು ರಾಹುಲ್ ನಿರ್ಧರಿಸ ಲಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಗಾದಿಯನ್ನೇರಲು ಸಜ್ಜಾಗಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ಅವರು ರವಿವಾರ ಇಲ್ಲಿ ಸ್ಪಷ್ಟಪಡಿಸಿದರು. ಮಾಜಿ ಕ್ರಿಕೆಟಿಗ ಸಿಧು ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅಮರಿಂದರ್,ರಾಜ್ಯದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಬಳಕೆಗೆ ಕಡಿವಾಣ ಹಾಕಲು ಕಾಂಗ್ರೆಸ್ ಈಗಾಗಲೇ ಯೋಜನೆ ಯೊಂದನ್ನು ರೂಪಿಸಿದೆ ಎಂದರು.
ಮಾದಕ ದ್ರವ್ಯ ಹಾವಳಿ ಚುನಾವಣೆ ಪ್ರಚಾರದಲ್ಲಿ ಪ್ರಮುಖ ವಿಷಯವಾಗಿದ್ದು, ಆಡಳಿತ ಬಾದಲ್ ಕುಟುಂಬವು ಡ್ರಗ್ ಮಾಫಿಯಾದೊಂದಿಗೆ ನಂಟು ಹೊಂದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
Next Story





