ಅಧ್ಯಕ್ಷೀಯ ಅರಮನೆ ತೊರೆದ ದ. ಕೊರಿಯ ಅಧ್ಯಕ್ಷೆ

ಸಿಯೋಲ್, ಮಾ. 12: ಸಾಂವಿಧಾನಿಕ ನ್ಯಾಯಾಲಯವು ಅಧ್ಯಕ್ಷ ಪದವಿಯಿಂದ ಕಿತ್ತೆಸೆದ ಎರಡು ದಿನಗಳ ಬಳಿಕ, ದಕ್ಷಿಣ ಕೊರಿಯದ ಅಧ್ಯಕ್ಷೆ ಪಾರ್ಕ್ ಗುಯನ್-ಹೈ ರವಿವಾರ ಅಧ್ಯಕ್ಷೀಯ ಅರಮನೆಯನ್ನು ತೊರೆದು ತನ್ನ ಮನೆಗೆ ಹಿಂದಿರುಗಿದ್ದಾರೆ.ಆದರೆ, ತನ್ನ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ನಿರಾಕರಿಸಿದ್ದಾರೆ.
‘‘ಸತ್ಯ ಖಂಡಿತವಾಗಿಯೂ ಹೊರಗೆ ಬರುತ್ತದೆ, ಆದರೆ, ಸ್ವಲ್ಪ ಸಮಯ ತೆಗೆದುಕೊಳ್ಳಬಹುದು’’ ಎಂದು ಹೇಳಿಕೆಯೊಂದರಲ್ಲಿ ಅವರು ಹೇಳಿದರು.ಇದು ನ್ಯಾಯಾಲಯದ ತೀರ್ಪಿನ ಬಳಿಕ ಅವರ ಮೊದಲ ಸಾರ್ವಜನಿಕ ಹೇಳಿಕೆಯಾಗಿದೆ.
Next Story





