ರಿಯಾದ್: ಕೆಸಿಎಫ್ ಬದಿಯ್ಯ ಸೆಕ್ಟರ್ ನ ವಾರ್ಷಿಕ ಮಹಾಸಭೆ

ರಿಯಾದ್, ಮಾ.12: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನಲ್ ಇದರ ಅಧೀನದಲ್ಲಿರುವ ಕೆಸಿಎಫ್ ಬದಿಯ್ಯ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ ಮಾ.9ರಂದು ಬದಿಯ್ಯ ಕೆಸಿಎಫ್ ಸೆಂಟರ್ ನಲ್ಲಿ ನಡೆಯಿತು.
ಅಲ್ ಮದೀನತುಲ್ ಮುನವ್ವರ ಮೂಡಡ್ಕದ ಜನರಲ್ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡಾವು ದುಆ ನೆರವೇರಿಸಿದರು. ಅಬ್ದುಲ್ ಅಝೀಝ್ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು. ಸೆಕ್ಟರ್ ಅಧ್ಯಕ್ಷ ಉಮರ್ ಅಳಕೆಮಜಲು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ರಿಯಾದ್ ಝೋನಲ್ ಸಂಘಟನಾ ಅಧ್ಯಕ್ಷ ಸಿದ್ದೀಕ್ ಸಖಾಫಿ " ಜೀವನ ನಾಳೆಗಾಗಿ ನಾಡಿಗಾಗಿ " ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಸೆಕ್ಟರ್ ಪ್ರ.ಕಾರ್ಯದರ್ಶಿ ಮಜೀದ್ ವಿಟ್ಲ ಮತ್ತು ಮಜೀದ್ ಚಿಕ್ಕಮಗಳೂರು ಅನುಕ್ರಮವಾಗಿ 2015/16 ನೆ ಸಾಲಿನ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ರಿಯಾದ್ ಝೋನಲ್ ಅಧ್ಯಕ್ಷ ನಝೀರ್ ಕಾಶಿಪಟ್ನ, ನೇತೃತ್ವದಲ್ಲಿ ಗತ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯ ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿದ್ದ ರಿಯಾದ್ ಝೋನಲ್ ಕಾರ್ಯನಿವಾಹಕ ಕಾರ್ಯದರ್ಶಿ ಸಲೀಂ ಕನ್ಯಾಡಿ, ರಿಯಾದ್ ಝೋನಲ್ ಸಂಘಟನಾ ಕನ್ವೀನರ್ ಇಸ್ಮಾಯಿಲ್ ಜೋಗಿಬೆಟ್ಟು ಹಾಗೂ ಬತ್ತಾ ಸೆಕ್ಟರ್ ಪ್ರ.ಕಾರ್ಯದರ್ಶಿ ಬಶೀರ್ ತಲಪಾಡಿ ನೂತನ ಸಮಿತಿಗೆ ಶುಭಹಾರೈಸಿದರು. ಅಬ್ದುಲ್ ಖಾದರ್ ಸಖಾಫಿ ಸ್ವಾಗತ ಮಾಡಿದರು.
ಕಾರ್ಯಕ್ರಮದ ಮೊದಲಿಗೆ ಶಫೀಖ್ ಅಹ್ಸನಿ ಕಿರಾಅತ್ ಪಠಿಸಿದರು. ಸೌದಿ ಪರ್ಯಟನೆಯಲ್ಲಿರುವ ಅಲ್ ಮದೀನತುಲ್ ಮುನವ್ವರ ಮೂಡಡ್ಕದ ಜನರಲ್ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡಾವು ರವರನ್ನು ಕೆಸಿಎಫ್ ಬದಿಯ್ಯ ಸೆಕ್ಟರ್ ವತಿಯಿಂದ ಸನ್ಮಾನಿಸಲಾಯಿತು.
2017/18 ನೆ ಸಾಲಿನ ನೂತನ ಸಮಿತಿಯ ವಿವರ:
ಅಧ್ಯಕ್ಷರು: ಉಮರ್ ಅಳಕೆಮಜಲು
ಪ್ರ.ಕಾರ್ಯದರ್ಶಿ: ಮಜೀದ್ ವಿಟ್ಲ
ಕೋಶಾಧಿಕಾರಿ: ಸುಲೈಮಾನ್ ಉಜಿರೆ
ಆರ್ಗನೈಝೇಶನ್ ಪ್ರೆಸಿಡೆಂಟ್ : ಹಮೀದ್ ಮುಲ್ಕಿ
ಆರ್ಗನೈಝೇಶನ್ ಸೆಕ್ರೆಟರಿ: ಬಶೀರ್ ಮೂರುಗೋಳಿ
ನಾಲೆಡ್ಜ್ ಪ್ರೆಸಿಡೆಂಟ್ : ಅಬೂಬಕರ್ ಸಂಪಿ
ನಾಲೆಡ್ಜ್ ಸೆಕ್ರೆಟರಿ: ಸಯ್ಯದ್ ತಾಜುದ್ದೀನ್
ಅಡ್ಮಿನಿಸ್ಟ್ರೇಶನ್ ಪ್ರೆಸಿಡೆಂಟ್: ಅಶ್ರಫ್ ಮದನಿ
ಅಡ್ಮಿನಿಸ್ಟ್ರೇಶನ್ ಸೆಕ್ರೆಟರಿ: ಅಬೂಬಕರ್ ಸಖಾಫಿ
ವೆಲ್ಫೇರ್ ಪ್ರೆಸಿಡೆಂಟ್: ಅಮೀರ್ ಕಲ್ಲಾಪು
ವೆಲ್ಫೇರ್ ಸೆಕ್ರೆಟರಿ: ಉಮರ್ ಫಾರೂಕ್ ಪೊಲ್ಯ
ಪಬ್ಲಿಕೇಶನ್ ಪ್ರೆಸಿಡೆಂಟ್ ಶಾಕಿರ್ ಪಚ್ಚಂಬಲ
ಪಬ್ಲಿಕೇಶನ್ ಸೆಕ್ರೆಟರಿ: ಸಲೀಂ ಮಿತ್ತೂರು
ಸಮಿತಿ ಪದಾಧಿಕಾರಿಗಳು: ಶಫೀಕ್ ಅಹ್ಸನಿ, ಹಮೀದ್ ಮುಕ್ಕ, ಅಬ್ದುಲ್ ರಝಾಕ್ ಕುಂದಡ್ಕ, ಮುಸ್ತಫ ಉಪ್ಪಿನಂಗಡಿ, ಹನೀಫ್ ಸಿಧ್ದಕಟ್ಟೆ, ಅಬ್ದುಲ್ ಕರೀಂ ಮುಸ್ಲಿಯಾರ್, ಶಮೀರ್ ಪಕ್ಷಿಕೆರೆ, ಸಮದ್ ಪಾಣೆಮಂಗಳೂರು, ನಿಸಾರ್ ಅಳಕೆಮಜಲು, ಸಲೀಂ ಪುತ್ತೂರು, ಅಶ್ರಫ್ ಪೊಯ್ಯತ್ ಬೈಲ್, ಲತೀಫ್ ನೂಜಿ.







