ಕೌಟುಂಬಿಕ ಕಲಹ ಪತ್ನಿಯನ್ನು ಕೊಂದ ಪತಿ
ಸಿದ್ದಾಪುರ, ಮಾ.12: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದು ಪತಿ ತಲೆ ಮರೆಸಿಕೊಂಡಿರುವ ಘಟನೆ ನಂಜರಾಯಪಟ್ಟಣ ಸಮೀಪದ ಬಾಳೆಗುಂಡಿ ಹಾಡಿಯಲ್ಲಿ ನಡೆದಿದೆ.
ಬಾಳೆಗುಂಡಿ ಹಾಡಿಯ ನಿವಾಸಿ ವಸಂತ(28) ತನ್ನ ಪತ್ನಿ ಪವಿತ್ರಾ(25) ಎಂಬಾಕೆಯನ್ನು ರವಿವಾರ ಬೆಳಗ್ಗೆ ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ವಸಂತ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಸುಬ್ರಹ್ಮಣಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ವಸಂತನ ವಿರುದ್ಧ ಮೊಕದ್ದಮೆ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story





