ರಿಯಾದ್: ಕೆಸಿಎಫ್ ನ್ಯೂಸನಯ್ಯ ಘಟಕದ ವಾರ್ಷಿಕ ಮಹಾಸಭೆ

ರಿಯಾದ್, ಮಾ.12: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನಲ್ ಅಧೀನದಲ್ಲಿರುವ ಕೆಸಿಎಫ್ ನ್ಯೂಸನಯ್ಯ ಘಟಕದ ವಾರ್ಷಿಕ ಮಹಾಸಭೆ ಮಾ.10ರಂದು ನ್ಯೂಸನಯ್ಯ ಫಯ್'ಹಾದಲ್ಲಿ ನಡೆಯಿತು.
ಸಭೆಯ ಉದ್ಘಾಟನೆಯನ್ನು ಕೆಸಿಎಫ್ ರಿಯಾದ್ ಝೋನಲ್ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಲೀಂ ಕನ್ಯಾಡಿ ನೆರವೇರಿಸಿದರು. ಸೆಕ್ಟರ್ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಮಾಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರಿಯಾದ್ ಝೋನಲ್ ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ಬುಲ್ಲಾ ಸಖಾಫಿ ಉಸ್ತಾದ್ "ಜೀವನ ನಾಡಿಗಾಗಿ, ನಾಳೆಗಾಗಿ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
2015-16ನೆ ಸಾಲಿನ ವರದಿಯನ್ನು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಸಮೀರ್ ಉಡುಪಿ ಹಾಗೂ ಲೆಕ್ಕ ಪತ್ರ ವನ್ನು ಸೆಕ್ಟರ್ ಕೋಶಾಧಿಕಾರಿ ಅಶ್ರಫ್ ಉಜಿರೆಬೆಟ್ಟು ಮಂಡಿಸಿದರು.
ಸದ್ರಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯ ರಚನೆಯ ನೇತೃತ್ವವನ್ನು ರಿಯಾದ್ ಝೋನಲ್ ನಿಂದ ವೀಕ್ಷಕರಾಗಿ ಆಗಮಿಸಿದ ಉಮರ್ ಅಳಕೆಮಜಲು ವಹಿಸಿದರು.
ರಿಯಾದ್ ಝೋನಲ್ ಸಂಘಟನಾ ಕನ್ವೀನರ್ ಇಸ್ಮಾಯಿಲ್ ಜೋಗಿಬೆಟ್ಟು , ರಿಯಾದ್ ಝೋನಲ್ ರಿಲೀಫ್ ಚೆಯರ್ ಮೆನ್ ರಮೀಝ್ ಕುಳಾಯಿ, ಬದಿಯಾ ಸೆಕ್ಟರ್ ಕಾರ್ಯದರ್ಶಿ ಮಜೀದ್ ವಿಟ್ಲ, ರಿಯಾದ್ ಝೋನಲ್ ಜೊತೆಕಾರ್ಯದರ್ಶಿ ಹಸೈನಾರ್ ಕಾಟಿಪಳ್ಳ , ಬತ್ತಾ ಸೆಕ್ಟರ್ ರಿಲೀಫ್ ಕನ್ವೀನರ್ ಶಮೀರ್ ಜೆಪ್ಪು ಆಶಂಸೆ ಭಾಷಣ ಮಾಡಿದರು. ರಿಯಾದ್ ಝೋನಲ್ ಸಕ್ರೀಯ ಕಾರ್ಯಕರ್ತ ರಶೀದ್ ಮದನಿ ರಂತಡ್ಕ ನೂತನ ಸಮಿತಿಗೆ ಶುಭ ಹಾರೈಸಿದರು.
ಮೊದಲಿಗೆ ಸಂಶುದ್ದೀನ್ ಉಳ್ಳಾಲ ಕಿರಾಅತ್ ಪಠಿಸಿದರೆ, ಶಮೀರ್ ಉಡುಪಿ ಸ್ವಾಗತ ಮಾಡಿದರು.ಕೊನೆಯಲ್ಲಿ ಸಿರಾಜ್ ಎಡಪದವು ಧನ್ಯವಾದ ಮಾಡಿದರು.ಶಾಫಿ ಎಡಪದವು ಕಾರ್ಯಕ್ರಮವನ್ನು ನಿರೂಪಿಸಿದರು.
2017 -18ನೆ ಸಾಲಿನ ನೂತನ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳ ವಿವರ ಈ ಕೆಳಗಿನಂತಿದೆ.
ಅಧ್ಯಕ್ಷರು: ಹಂಝ ಜಲ್ಸೂರು
ಪ್ರಧಾನ ಕಾರ್ಯದರ್ಶಿ: ಶಮೀರ್ ಉಡುಪಿ
ಕೋಶಾಧಿಕಾರಿ: ಅಬ್ದುಲ್ಲ ಬಜಾಲ್
ಉಪಾಧ್ಯಕ್ಷರು: ಮೊಹಮ್ಮದ್ ಮುಸ್ಲಿಯಾರ್ ಮಾಚಾರ್ ಹಾಗು ಅಶ್ರಫ್ ಮೂಡಬಿದ್ರೆ
ಜಂಟಿ ಕಾರ್ಯದರ್ಶಿ: ಶಂಸುದ್ದೀನ್ ಉಳ್ಳಾಲ ಹಾಗು ಅನ್ಸಾರ್ ಮೂಡಬಿದ್ರೆ
ಕಾರ್ಯಕಾರಿ ಸಮಿತಿ ಸದಸ್ಯರುಗಳು: ಅಬ್ಬಾಸ್ ಮಡಿಕೇರಿ, ಸಲೀಂ ಕನ್ಯಾಡಿ, ಮೊಯ್ದಿನ್ ಮೂಡಬಿದ್ರೆ, ಅಶ್ರಫ್ ಉಜಿರೆಬೆಟ್ಟು, ಇಮ್ರಾನ್ ಉಜಿರೆಬೆಟ್ಟು, ಇರ್ಫಾನ್ ಕಾರ್ಪಾಡಿ, ಅಶ್ರಫ್ ಎಡಪದವು, ಜಲೀಲ್ ಎಡಪದವು, ಶಾಫಿ ಎಡಪದವು, ಸಿರಾಜ್ ಎಡಪದವು.







